Latest

ಭೀಕರ ಅಪಘಾತ: ಏಕಾಏಕಿ ಹೊತ್ತಿ ಉರಿದ ಬಸ್; 11 ಪ್ರಯಾಣಿಕರು ಸಜೀವದಹನ

ಪ್ರಗತಿವಾಹಿನಿ ಸುದ್ದಿ; ನಾಸಿಕ್: ಚಲಿಸುದ್ದಿದ್ದ ಬಸ್ ಏಕಾಏಕಿ ಹೊತ್ತಿ ಉರಿದ ಪರಿಣಾಮ 11 ಜನ ಪ್ರಯಾಣಿಕರು ಸಜೀವ ದಹನಗೊಂಡಿದ್ದು, 21 ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಬಳಿ ನಡೆದಿದೆ.

ಬಸ್ ಟ್ರಕ್ ಗೆಡಿಕ್ಕಿ ಹೊಡೆದ ಪರಿಣಾಪ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬಸ್ ಹೊತ್ತಿ ಉರಿದಿದೆ. ಬಸ್ ನಲ್ಲಿದ್ದ ಪ್ರಯಾಣಿಕರಲ್ಲಿ 11 ಜನರು ಸಜೀವದಹನಗೊಂಡಿದ್ದಾರೆ. 21 ಜನರು ಗಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಜಾನೆ 5 ಗಂಟೆ ಸುಮಾರಿಗೆ ಔರಾಂಗಾಬಾದ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಸ್ಲೀಪರ್ ಕೋಚ್ ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು. ಬಸ್ ನಂದೂರ್ ನಾಕಾ ಬಳಿ ಟ್ರಕ್ ಗೆ ಡಿಕ್ಕಿಹೊಡೆದಿದೆ. ಕೆಲವೇಕ್ಷಣಗಳಲ್ಲಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಿಗೆ ಗೊತ್ತಾಗುವಷ್ಟರಲ್ಲಿ ಇಡೀ ಬಸ್ ಹೊತ್ತಿ ಉರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕೋಡಿ: ಪತ್ನಿ ಮೇಲೆ ಕಣ್ಣು ಹಾಕಿದನೆಂದು ಯುವಕನ ಕೊಲೆಗೈದ ಆರೋಪಿ ಬಂಧನ

Home add -Advt

https://pragati.taskdun.com/latest/murder-accused-of-young-man-arrested-in-karoshi-villege-chikkodi-belagavi/

Related Articles

Back to top button