Kannada NewsKarnataka NewsLatest

ನಾಸಿರ್ ಬಾಗವಾನ್ ಹಿಡಿತಕ್ಕೆ ‘ರಾಣಿ’

ಪ್ರಗತಿವಾಹಿನಿ ಸುದ್ದಿ, ಎಂ.ಕೆ.ಹುಬ್ಬಳ್ಳಿ (ಚನ್ನಮ್ಮನ ಕಿತ್ತೂರು) :    ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ (ರಾಣಿ ಶುಗರ್ಸ್)  ಚುನಾವಣೆ ಬುಧವಾರ ನಡೆದಿದ್ದು, ನಾಸಿರ್ ಬಾಗವಾನ್ ಗುಂಪು ಸಂಪೂರ್ಣ ಸ್ವೀಪ್ ಮಾಡಿದೆ. 15ಕ್ಕೆ 15 ಸ್ಥಾನಗಳನ್ನೂ ಗೆಲ್ಲುವ ಮೂಲಕ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಪುತ್ರ ಪ್ರಕಾಶ ಪಾಟೀಲ್ ಅವರಿಗೆ ತೀವ್ರ ನಿರಾಸೆ ಉಂಟು ಮಾಡಿದ್ದಾರೆ.
ಒಟ್ಟು 2452 ಮತದಾರರ ಪೈಕಿ 2049 (83.6% ) ಮತದಾರು ಮತ ಚಲಾವಣೆ ಮಾಡಿದ್ದರು. ಬೆಳಗಿನಜಾವ 2 ಗಂಟೆಯವರೆಗೂ ಮತ ಎಣಿಕೆ ನಡೆಯಿತು.
 ನಾಸೀರ ಬಾಗವಾನ್ ಹಾಗೂ ಪ್ರಕಾಶಗೌಡ ಪಾಟೀಲ ಪೆನಲ್ ನಡುವೆ ಪೈಪೋಟಿ  ಇತ್ತು. ಅಂತಿಮವಾಗಿ ಗಂದಿಗವಾಡದ ನಾಸಿರ್ ಬಾಗವಾನ್ ತಮ್ಮ ಗುಂಪಿನ ಎಲ್ಲರನ್ನೂ ಗೆಲ್ಲಿಸಿಕೊಂಡು ಅಧಿಕಾರದ ಗದ್ದುಗೆಗೆ ಏರಿದರು.
ಗೆಲುವು ಸಾಧಿಸಿದವರ ವಿವರ ಹೀಗಿದೆ –
ನಾಸಿರುದ್ದೀನ ಬಾಗವಾನ -ಗಂದಿಗವಾಡ, ಅಶೋಕ ಯಮಕನಮರಡಿ -ಗಂದಿಗವಾಡ,  ಅಶೋಕ ಬೆಂಡಿಗೇರಿ -ಚಿಕ್ಕ ಮುನವಳ್ಳಿ,  ಮಂಜುನಾಥ ಪಾಟೀಲ- ದಾಸ್ತಿಕೊಪ್ಪ,  ಲಕ್ಷ್ಮಣ ಎಮ್ಮಿ -ಮಲ್ಲಾಪುರ ಕೆ ಎ, ಸಿದ್ದಪ್ಪ ದೊರೆಪ್ಪನವರ-ಹೂಲಿಕಟ್ಟಿ,  ಭರತೇಶ್ ಶೇಬಣ್ಣವರ -ದೇವರಶಿಗಿಹಳ್ಳಿ, ಬಸವರಾಜ ಬೆಂಡಿಗೇರಿ-ಎಂಕೆ ಹುಬ್ಬಳ್ಳಿ, ಜ್ಯೋತಿಬಾ ಹೈಬತ್ತಿ-ಕಾದರವಳ್ಳಿ, ಬಸವರಾಜ ಪುಂಡಿ- ಇಟಗಿ, ಶಂಕರಗೌಡ ಪಾಟೀಲ – ಬೈಲೂರು,  ಸಂಜೀವ್ ಹುಬಳ್ಯೆಪ್ಪನವರ -ಎಂಕೆ ಹುಬ್ಬಳ್ಳಿ, ಸಾವಂತ ಕಿರಬನವರ- ತಿಗಡೊಳ್ಳಿ, ಮೀನಾಕ್ಷಿ ನೆಲಗಳಿ-ಬೋಗೂರ, ಲಕ್ಷ್ಮಿ ಅರಳಿಕಟ್ಟಿ -ಹಿರೇಬಾಗೇವಾಡಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button