Karnataka NewsLatest

ಇಂದಿನಿಂದ ಬೆಳಗಾವಿ ಪೊಲೀಸರ ವಿನೂತನ ಕಾರ್ಯಕ್ರಮ

*ಜನಸ್ನೆಹಿ ಪೊಲೀಸ್* ಕಾರ್ಯಕ್ರಮ -ಕಾಲ್ನಡಿಗೆ ಗಸ್ತು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾನಗರ ಪೊಲೀಸರು ಇಂದಿನಿಂದ ವಿನೂತನ ಕಾರ್ಯಕ್ರಮವೊಂದನ್ನು ಹಾಕಿಕೊಂಡಿದ್ದಾರೆ.

ತ್ಯಾಗರಾಜನ್
ವಿಕ್ರಂ ಅಮಟೆ

*ಜನಸ್ನೆಹಿ ಪೊಲೀಸ್* ಕಾರ್ಯಕ್ರಮದ ಅಡಿಯಲ್ಲಿ ಇವತ್ತಿನಿಂದ ಬೆಳಗಾವಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಎಲ್ಲ ಅಧಿಕಾರಿಗಳು ಕಾಲ್ನಡಿಗೆ ಗಸ್ತು ನಡೆಯಲಿದ್ದಾರೆ.

ಅವರವರ ಠಾಣೆಯ ಬೀಟ್ ಪ್ರದೇಶಗಳಲ್ಲಿ ಬೀಟ್ ಸಿಬ್ಬಂದಿ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿಯೊಂದಿಗೆ *ಪ್ರತಿದಿನ ಸಾಯಂಕಾಲ 7 ಗಂಟೆಯಿಂದ 9 ಗಂಟೆವರೆಗೆ *ಕಾಲ್ನಡಿಗೆ ಗಸ್ತು* ನಡೆಸಲಿದ್ದಾರೆ.

 

Home add -Advt

ತನ್ಮೂಲಕ   ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸಹಕಾರ ಕೋರಲಿದ್ದಾರೆ. ಈ ಕಾರ್ಯಾಚರಣೆಯು ಇನ್ನು ಮುಂದೆ ಪ್ರತಿನಿತ್ಯ ಜರುಗಲಿದ್ದು ಸಾರ್ವಜನಿಕರು ಪೊಲೀಸರೊಡನೆ ಹೆಚ್ಚಿನ ಆಸಕ್ತಿ ವಹಿಸಿ ಅವರ ಅಹವಾಲುಗಳನ್ನು ಮತ್ತು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪೊಲೀಸ್ ಆಯುಕ್ತ ತ್ಯಾಗರಾಜನ್ ಹಾಗೂ ಡಿಸಿಪಿ ವಿಕ್ರಂ ಅಮಟೆ ಕೋರಿದ್ದಾರೆ.

ಮಹಿಳಾ ಪೊಲೀಸ್ ಪೇದೆಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

Related Articles

Back to top button