Cancer Hospital 2
Laxmi Tai Society2
Beereshwara add32

*ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ರಾಷ್ಟ್ರ ಮಟ್ಟದ ಖ್ಯಾತ ಕಬಡ್ಡಿ ಆಟಗಾರ: ಆತ್ಮಹತ್ಯೆಗೆ ಶರಣು*

Anvekar 3

ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ಮಟ್ಟದ ಖ್ಯಾತ ಕಬಡ್ಡಿ ಆಟಗಾರರೊಬ್ಬರು ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ.

ವಿನೋದ್ (24) ಆತ್ಮಹತ್ಯೆಗೆ ಶರಣಾದವರು. ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮೂರು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಪತ್ನಿ ತನ್ನನ್ನು ಬಿಟ್ಟು ಹೋದಳೆಂಬ ಕಾರಣಕ್ಕೆ ಮನನೊಂದ ವಿನೋದ್ ನೇಣಿಗೆ ಕೊರಳೊಡ್ಡಿದ್ದಾರೆ.

ವಿನೋದ್ ಹಾಗೂ ತನುಷಾ ಎಂಬ ಯುವತಿ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ತುನುಷಾ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ. ಕಳೆದ ಮೂರು ದಿನಗಳ ಹಿಂದೆ ವಿನೋದ್ ಹಾಗೂ ತನುಷಾ ಓಡಿ ಹೋಗಿ ಮದುವೆಯಾಗಿದ್ದರು. ಇದರಿಂದ ತನುಷಾ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Emergency Service

ಚಿಕ್ಕಮಗಳೂರು ಪೊಲೀಸರು ತನುಷಾ ಕುಟುಂಬದ ದೂರಿನ ಮೇರೆಗೆ ನವಜೋಡಿಯನ್ನು ಠಾಣೆಗೆ ಕರೆಸಿದ್ದಾರೆ. ಠಾಣೆಗೆ ಬಂದ ತನುಷಾ ಉಲ್ಟಾ ಹೊಡೆದಿದ್ದಾಳೆ. ತಾನು ತಾಯಿ ಮನೆಗೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದಾಳೆ. ಮದುವೆಯಾದ ಮೂರೇ ದಿನಕ್ಕೆ ತನುಷಾ ಗಂಡನನ್ನು ತೊರೆದು ತವರು ಮನೆ ಸೇರಿದ್ದಾಳೆ. ಇದರಿಂದ ತೀವ್ರವಾಗಿ ಮನನೊಂದಿದ್ದ ವಿನೋದ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.


Gokak Jyotishi add 8-2
Bottom Add3
Bottom Ad 2

You cannot copy content of this page