Latest

ಹತ್ಯೆ ಸುದ್ದಿ ಬೆನ್ನಲ್ಲೇ ಖುದ್ದು ಹೇಳಿಕೆ ನೀಡಿದ ಕುಸ್ತಿಪಟು; ನಾನು ಜೀವಂತವಾಗಿದ್ದೇನೆ ಎಂದ ನಿಶಾ ದಹಿಯಾ

ಪ್ರಗತಿವಾಹಿನಿ ಸುದ್ದಿ; ಹರ್ಯಾಣ: ನನ್ನ ಮೇಲೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ, ನಾನು ಹಾಗೂ ನನ್ನ ಕುಟುಂಬದವರು ಸುರಕ್ಷಿತವಾಗಿದ್ದಾರೆ ಎಂದು ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ ನೀಡಿದ್ದಾರೆ.

ಖುದ್ದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಿಶಾ ದಹಿಯಾ, ಗುಂಡಿನ ದಾಳಿಯಲ್ಲಿ ನಾನು ಮೃತಪಟ್ಟಿದ್ದೇನೆ ಎಂಬ ಸುದ್ದಿ ವರದಿಯಾಗುತ್ತಿದೆ. ಇದು ಸುಳ್ಳು. ನನ್ನ ಮೇಲೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ. ನಾನು ಜೀವಂತವಾಗಿದ್ದೇನೆ ಎಂದು ತಿಳಿಸಿದ್ದಾರೆ.

Home add -Advt

ನಾನು ಪ್ರಸ್ತುತ ಉತ್ತರಪ್ರದೇಶದ ಗೋಂಡಾದಲ್ಲಿದ್ದೇನೆ. ನನ್ನ ಕುಟುಂಬದವರೂ ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಹಾಗೂ ಆಕೆಯ ಸಹೋದರನ ಮೇಲೆ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು ಇಬ್ಬರನ್ನು ಗುಂಡಿಟ್ತು ಹತ್ಯೆಗೈದಿದ್ದಾರೆ. ಘಟನೆಯಲ್ಲಿ ನಿಶಾ ತಾಯಿಗೂ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತ: ಸ್ಪಷ್ಟನೆ ನೀಡಿರುವ ನಿಶಾ ದಹಿಯಾ ನಾನು ಜೀವಂತವಾಗಿದ್ದೇನೆ ಹಾಗೂ ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಕುಸ್ತಿಪಟು ನಿಶಾ ದಹಿಯಾ ಹಾಗೂ ಸಹೋದರನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

Related Articles

Back to top button