Latest

ಕುಸ್ತಿಪಟು ನಿಶಾ ದಹಿಯಾ ಹಾಗೂ ಸಹೋದರನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಪ್ರಗತಿವಾಹಿನಿ ಸುದ್ದಿ; ಹರ್ಯಾಣಾ: ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಹಾಗೂ ಆಕೆಯ ಸಹೋದರನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಹರ್ಯಾಣಾದಲ್ಲಿ ನಡೆದಿದೆ.

ಸುಶೀಲ್ ಕುಮಾರ್ ವ್ರೆಸ್ಲಿಂಗ್ ಅಕಾಡೆಮಿ ಬಳಿ ನಿಶಾ ದಹಿಯಾ ಹಾಗೂ ಆಕೆ ಸಹೋದರ ಸೂರಜ್ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಇಬ್ಬರನ್ನು ಹತ್ಯೆಗೈದಿದ್ದಾರೆ. ಈ ವೇಳೆ ನಿಶಾ ತಾಯಿ ಅವರಿಗೂ ಗುಂಡೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗೆ ಸರ್ಬಿಯಾದಲ್ಲಿ ನಡೆದ ವರ್ಲ್ಡ್ ಯು-23 ಚಾಂಪಿಯನ್ ಶಿಪ್ ಟೂರ್ನಿಯಲ್ಲಿ 65 ಕೆಜಿ ಮಹಿಳಾ ಕುಸ್ತಿಪಟು ವಿಭಾಗದಲ್ಲಿ ನಿಶಾ ಕಂಚಿನ ಪದಕ ಗೆದ್ದಿದ್ದರು. ನಿಶಾ ಹಾಗೂ ಆಕೆಸಹೋದರನ ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ಹ್ಯಾಕರ್ ಶ್ರೀಕಿ

Related Articles

Back to top button