GIT add 2024-1
Laxmi Tai add
Beereshwara 33

ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕ್ ಗೆ ಕಾಗೇರಿ ತಿರುಗೇಟು

ಉಗಾಂಡಾದ ಕಂಪಾಲದಲ್ಲಿ ನಡೆದ CPA ಯ 64ನೇ ಸಮ್ಮೇಳನ

Anvekar 3
Cancer Hospital 2
ಉಗಾಂಡಾ –  ಉಗಾಂಡಾದ ಕಂಪಾಲದಲ್ಲಿ ನಡೆದ CPA ಯ 64ನೇ ಸಮ್ಮೇಳನದ ‘ಸಾಮಾನ್ಯ ಸಭೆಯಲ್ಲಿ’ ಭಾರತದ ಜಮ್ಮು-ಕಾಶ್ಮೀರದ ಸದಸ್ಯತ್ವವನ್ನು ಅಮಾನತ್ತಿನಲ್ಲಿ ಇಟ್ಟಿರುವ ವಿಧೇಯಕ್ಕೆ ಅನುಮೋದನೆ ನೀಡುವ ವಿಷಯದಲ್ಲಿ ಪಾಕಿಸ್ತಾನ ಅನಗತ್ಯವಾಗಿ ಜಮ್ಮು-ಕಾಶ್ಮೀರದಲ್ಲಿ ಸೈನಿಕ ಆಡಳಿತ ಇದೆ, ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ, ಇತ್ಯಾದಿ ವಿಷಯವನ್ನು ಪ್ರಸ್ತಾಪಿಸಿತು.
ಈ ಸಮಯದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ಕರ್ನಾಟಕದ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವಿಷಯ ಭಾರತ ದೇಶದ ಆಂತರಿಕ ವಿಷಯ ಮತ್ತು ಭಾರತದ ಪಾರ್ಲಿಮೆಂಟ್ ಗೆ ಈ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ ಎಂದರು.
Emergency Service
ಮತ್ತು ಹಿಮಾಚಲ ರಾಜ್ಯದ ವಿಧಾನ ಸಭೆಯ ಅಧ್ಯಕ್ಷರಾದ  ರಾಜೀವ ಬಿಂದಲ್ ರವರೂ ಸಹ ಮಾತನಾಡಿ, ಈ ವಿಷಯವನ್ನು ಇಲ್ಲಿ, ಹೀಗೆ ಪ್ರಸ್ತಾಪಿಸಿರುವುದನ್ನು ವಿರೋಧಿಸಿದರು.
ಹಾಗೂ ಅಸ್ಸಾಂ ವಿಧಾನ ಸಭೆಯ ಅಧ್ಯಕ್ಷರು ಜಮ್ಮು-ಕಾಶ್ಮೀರದಲ್ಲಿ ಸೈನಿಕ ಆಡಳಿತ ಇಲ್ಲಾ, ಅಲ್ಲಿ ರಾಜ್ಯಪಾಲರ ಆಡಳಿತ ಇದೆ ಎಂದು ಸ್ಪಷ್ಟ ಪಡಿಸಿದರು.
 ಸಭೆಯ ಚರ್ಚೆಯ ಮಧ್ಯದಲ್ಲಿ ರಾಜ್ಯ ಸಭೆಯ ಸದಸ್ಯೆ ರೂಪಾ ಗಂಗೂಲಿ,  ಮಾತನಾಡಿ ಪಾಕಿಸ್ತಾನ ಅನಗತ್ಯವಾಗಿ ಈ ವಿಷಯವನ್ನು ಇಲ್ಲಿ ಚರ್ಚಿಸುತ್ತಿದೆ. ಇದಕ್ಕೆ ಅವಕಾಶವಾಗಬಾರದೆಂದು ಹೇಳಿದರು. ಸಭೆ ಮುಂದುವರೆದಿದೆ.
Bottom Add3
Bottom Ad 2