Advertisement -Home Add

ದೆಹಲಿ ಗದ್ದುಗೆ ಉಳಿಸಿಕೊಳ್ಳುವತ್ತ ಆಪ್

ಕಾಂಗ್ರೆಸ್ ಶೂನ್ಯ ಫಲಿತಾಂಶದತ್ತ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ನವದೆಹಲಿ ಚುನಾವಣೆಯಲ್ಲಿ ಮತ್ತೆ ಆಮ್ ಆದ್ಮಿ ಪಾರ್ಟಿ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ. 70 ಸ್ಥಾನಗಳ ಪೈಕಿ 56 ಸ್ಥಾನಗಳಲ್ಲಿ ಆಪ್ ಮುನ್ನಡೆ ಸಾಧಿಸಿದೆ. ಬಿಜೆಪಿ 14  ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಸಾಧನೆ ಶೂನ್ಯದತ್ತ ಸಾಗಿದೆ.

ಇದರಿಂದಾಗಿ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾಗುವ ಹಂತದಲ್ಲಿದೆ.

ಹಲವಾರು ಆರೋಪ, ವಿವಾದಗಳ ಮಧ್ಯೆಯೂ ಅರವಿಂದ ಕೇಜ್ರಿವಾಲ್ ಅವರ ಆಪ್ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಜನಸಾಮಾನ್ಯರ ಹಿತದೃಷ್ಟಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಹಾಗೂ ಸಾಮಾನ್ಯ ಜನರಿಗಾಗಿ ಹಲವಾರು ಘೋಷಣೆಗಳನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಮಾಡಿದ್ದು ಆಪ್ ಗೆಲ್ಲಲು ಸಹಕಾರಿಯಾಗಿದೆ.

ಅಲ್ಲದೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿ ಸೇರಿದಂತೆ ಹಲವಾರು ವಿಫಲತೆಗಳೂ ಆಪ್ ಮುನ್ನಡೆಗೆ ಕಾರಣವಾಗಿರಬಹುದು. ಇದೊಂದು ಬಿಜೆಪಿಗೆ ದೊಡ್ಡ ಪಾಠ ಎಂದೇ ವಿಶ್ಲೇಷಿಸಲಾಗುತ್ತಿದೆ.

ಆಪ್ ಜೊತೆಗೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಬಿಜೆಪಿ ಆರೋಪಿಸಿದೆ. ಏನೇ ಆದರೂ ಬಿಜೆಪಿಗೆ ರಾಷ್ಟ್ರ ರಾಜಧಾನಿಯಲ್ಲೇ ಆಗಿರುವ ಹಿನ್ನಡೆ ದೊಡ್ಡ ಅವಮಾನವೇ ಸರಿ.