ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೇಂದ್ರ ಸರ್ಕಾರದ ಅಪರೂಪದ ಕಾಯಿಲೆಗಳಿಗೆ ರಾಷ್ಟ್ರೀಯ ನೀತಿ-೨೦೨೧ ಅಂತಿಮ ರೂಪದ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ: ಭಾರತಿ ಪ್ರವೀಣ ಪವಾರ ಅವರು ಶುಕ್ರವಾರ ಉತ್ತರ ಪೂರೈಸಿದ್ದಾರೆ.
ಅಪರೂಪದ ಕಾಯಿಲೆಗಳಿಗೆ ರಾಷ್ಟ್ರೀಯ ನೀತಿ ೨೦೨೧ (ನೀತಿ) ಅನ್ವಯ ರೋಗಿಗಳಿಗೆ ಆರ್ಥಿಕ ನೆರವು ನೀಡಲು ಯೋಜನೆ ಸ್ವರೂಪವನ್ನು ಅಂತಿಮಗೊಳಿಸಲಾಗಿದ್ದು. ನೀತಿಯನ್ನು ಸರ್ಕಾರದ ವೆಬ್‌ಸೈಟ್ https://main.mohfw.gov.in/documents/policy ದಲ್ಲಿ ಪ್ರಚುರಪಡಿಸಲಾಗಿದೆ.
ಈ ಯೋಜನೆ ಅನ್ವಯ ಅಪರೂಪದ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮತ್ತು ಜಾಗೃತಿ ಮೂಡಿಸುವುದು ಮತ್ತು ಇಂತಹ ಮರಣಾಂತಿಕ ಅಪರೂಪದ ಕಾಯಿಲೆಗಳ ಪ್ರಮಾಣ ಕಡಿಮೆಗೊಳಿಸುವುದು ಮತ್ತು ಇವುಗಳನ್ನು ಗುಣಪಡಿಸಲು ಸಂಪನೂಲಗಳ ಹೆಚ್ಚಳ, ಸ್ಪರ್ದಾತ್ಮಕ ಆರೋಗ್ಯ ರಕ್ಷೆಯನ್ನು ನೀಡಿ ಕೈಗೆಟುಕುವ ವೆಚ್ಚದಲ್ಲಿ ಆರೋಗ್ಯ ಸೇವೆ ನೀಡಲು ಪ್ರವೇಶ ಸಕ್ರಿಯಗೊಳಿಸುತ್ತಿದೆ.
ವಿವಾಹಪೂರ್ವ ಮಕ್ಕಳ ಜನನ ತಡೆಗಟ್ಟುವಿಕೆ, ವಿವಾಹಪೂರ್ವ ಸಂಬಂಧಗಳು ಮತ್ತು ಅದರಿಂದಾಗುವ ತೊಂದರೆಗಳು, ಇವುಗಳ ಬಗ್ಗೆ ಮಕ್ಕಳಲ್ಲಿ, ಯುವಕ-ಯುವತಿಯರಿಗೆ ಸಮಾಲೋಚನೆ ಮೂಲಕ ಅಪರೂಪದ ಕಾಯಿಲೆಗಳ ಸಂಭವ ಮತ್ತು ಹರಡುವಿಕೆ ಕಡಿಮೆಗೊಳಿಸುವ ಕಾರ್ಯತಂತ್ರವನ್ನು ರೂಪಿಸುವ ಯೋಜನೆ ಇದಾಗಿದೆ.
ಇದರ ಕರಡು ನೀತಿಗೆ ೨೭೯ ಸಲಹೆಗಳನ್ನು ಸ್ವೀಕರಿಸಲಾಗಿತ್ತು. ಈ ಯೋಜನೆ ಅಡಿ (ಅಂಬ್ರೇಲಾ) ರಾಷ್ಟ್ರೀಯ ಆರೋಗ್ಯ ನಿಧಿ ಅಡಿ ಕೇಂದ್ರ ಸರ್ಕಾರವು ಚಿಕಿತ್ಸೆಗಾಗಿ ರೂ. ೨೦ ಲಕ್ಷ ರೂಗಳನ್ನು ಒಂದು ಬಾರಿ ಅಗತ್ಯವಿರುವ ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಯೋಜಿಸಿದ್ದು, ಇದನ್ನು ಬಿಪಿಎಲ್ ಕುಟುಂಬಗಳನ್ನು ಒಳಗೊಂಡಂತೆ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಎಲ್ಲ ಅರ್ಹರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಅಂದರೆ ಶೇ ೪೦ ರಷ್ಟು ಜನಸಂಖ್ಯೆಯನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಸಿಎಂ; ಹೊಸ ಸಂಪುಟ; ಯಾರ್ಯಾರು ಔಟ್? ಯಾರ್ಯಾರು ಇನ್…?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ