Kannada NewsLatest

*ನವರಾತ್ರಿಯಲಿ ನವದುರ್ಗೆಯರ ವೈಭವ*

ಜಯಶ್ರೀ ಜೆ. ಅಬ್ಬಿಗೇರಿ
ಶಕ್ತಿಯ ಆರಾಧನೆ ಭಾರತೀಯರಿಗೆ ಹೊಸದೇನಲ್ಲ. ಮೊದಲಿನಿಂದಲೂ ಶಕ್ತಿಗೆ ವಿಶೇಷ ಆದ್ಯತೆ ನೀಡಿ ಹೊಸ ಭಾಷ್ಯ ಬರೆದ ಕೀರ್ತಿ ನಮಗೆ ಸಲ್ಲುತ್ತದೆ. ಹಿಂದೂ ಧರ್ಮದಲ್ಲಿ ದುರ್ಗಾ ದೇವಿಯ ಒಂಭತ್ತು ಅಭಿವ್ಯಕ್ತಿಗಳನ್ನು ವಿಶೇಷವಾಗಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಒಂದೊಂದು ಅಭಿವ್ಯಕ್ತಿಯು ಒಂದೊಂದು ಗುಣಲಕ್ಷಣಗಳನ್ನು ತಿಳಿಸುತ್ತದೆ. ಸರ್ವಂತರ್ಯಮಿಯಾದ ಸರ್ವವ್ಯಾಪಕಳಾಗಿರುವ ಸಾಕ್ಷಾತ್ ಪ್ರಜ್ಞಾ ಸ್ವರೂಪಿಣಿ ದುರ್ಗಾ ದೇವಿ ವಿರಾಟ ರೂಪ ಧರಿಸಿರುವುದನ್ನು ಹಲವು ಪುರಾಣೇತಿಹಾಸಗಳಲ್ಲಿ ಉಲ್ಲೇಖಿಸಲಾಗಿದೆ. ನವದುರ್ಗೆಯರಿಗೂ ನವರಾತ್ರಿಗೂ ಬಿಡದ ನಂಟಿದೆ. ಸಾವಿರಾರು ವರ್ಷಗಳಿಂದ ನವರಾತ್ರಿಯಲ್ಲಿ ವೈಭವ ಮೆರೆದು ಭಕ್ತರನ್ನು ಹರಸಿ ಅನುಗ್ರಹಿಸುತ್ತಿರುವ ನವದುರ್ಗೆಯರ ಸ್ಥೂಲ ಪರಿಚಯ ಇಲ್ಲಿದೆ.


ಒಂಭತ್ತು ದುರ್ಗೆಯರ ಹೆಸರುಗಳು ಶೈಲಪುತ್ರಿ, ಬ್ರಹ್ಮಚಾರಿಣಿ ಚಂದ್ರಘಂಟ, ಕೂಶ್ಮಾಂಡ, ಸ್ಕಂದಮಾತ, ಕಾತ್ಯಾಯಿಣಿ ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿರಾತ್ರಿ.


ಶೈಲಪುತ್ರಿ:
ದಕ್ಷ ಯಜ್ಞದಲ್ಲಿ ಅವಮಾನ ತಾಳಲಾಗದೆ ಅಗ್ನಿ ಪ್ರವೇಶ ಮಾಡಿದ ದಾಕ್ಷಾಯಣಿಯೇ ಶೈಲಪುತ್ರಿ. ನವದುರ್ಗೆಯರಲ್ಲಿ ಮೊದಲನೆಯವಳು ಈಕೆ ಹಿಮಾವಣನ ಮಗಳಾಗಿದ್ದು. ಈಕೆ ಗೂಳಿಯ ಮೇಲೆ ಮಲಗಿದ್ದಾಳೆ. ತ್ರಿಶೂಲವನ್ನು ಹಿಡಿದಿದ್ದಾಳೆ. ಕಾರ್ತಿಕೇಯ ಮತ್ತು ಗಣೇಶ ಈಕೆಯ ಪುತ್ರರು. ಉಪನಿಷತ್ತಿನ ಪ್ರಕಾರ ಶೈಲಪುತ್ರಿ ಇಂದ್ರನ ಈರ್ಷ್ಯೆಯನ್ನು ಭಂಗ ಮಾಡುತ್ತಾಳೆ.


ಬ್ರಹ್ಮಚಾರಿಣಿ:
ಬ್ರಹ್ಮ ಎಂದರೆ ತಪಸ್ಸು. ಎಂದರ್ಥ.ಚರಿಣಿ ಒಬ್ಬ ಮಹಿಳೆ ಅನುಯಾಯಿಯಾಗಿದ್ದು. ಸ್ತ್ರೀ ಸಂಪ್ರದಾಯದ ರೂಪದಲ್ಲಿದ್ದಾಳೆ. ಸದ್ಗುಣ, ಶಾಂತಿ, ಸಮೃದ್ಧಿ, ಸಂತೋಷಕ್ಕಾಗಿ ಪೂಜಿಸಲ್ಪಡುವಳು. ಬ್ರಹ್ಮನಿಂದ ಆರಾಧಿಸಲ್ಪಡುವವಳು. ಈ ಅಭಿವ್ಯಕ್ತಿಯು ಜ್ಞಾನ ಮತ್ತು ಬೋಧನೆಯ ಮೂರ್ತರೂಪವಾಗಿದೆ. ಶಿವನನ್ನು ತನ್ನ ಪತಿಯಾಗಿ ಪಡೆಯುವ ಮಾರ್ಗವೂ ಆಗಿದೆ. ತಪೋನಿರತಳಾದ ಬ್ರಹ್ಮಚಾರಿಣಿ ಆಧ್ಯಾತ್ಮ ಜಾಗೃತಿಗೆ ಪೂರಕವಾಗುತ್ತಾಳೆ.


ಚಂದ್ರಘಂಟ:
ಚಂದ್ರಘಂಟ ನವದುರ್ಗೆಯರಲ್ಲಿ ಮೂರನೆಯವಳು. ಸುವರ್ಣ ವರ್ಣದವಳು. ತಲೆಯ ಮೇಲೆ ಒಂದು ಗಂಟೆಯಂತೆ ಆಕಾರ ಹೊಂದಿದ ಅರ್ಧ ವೃತ್ತಾಕಾರದ ಚಂದ್ರನನ್ನು ಧರಿಸಿದ್ದಾಳೆ. ಈಕೆ ಸಿಂಹ ವಾಹಿನಿ.ತನ್ನ ಎಂಟು ಕೈಗಳಲ್ಲಿ ಶಂಖ, ತ್ರಿಶೂಲ, ಕತ್ತಿ, ಗುರಾಣಿ, ಗರಗಸ, ಬಿಲ್ಲು ಮತ್ತು ಬಾಣಗಳಂಥ ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದಾಳೆ. ಈಕೆಯನ್ನು ಚಿನ್ನದ ಮಹಿಳೆಯನ್ನಾಗಿ ಚಿತ್ರಿಸಲಾಗಿದೆ. ದುರ್ಗಾ ದೇವಿಯ ಅತ್ಯಂತ ಹಿಂಸಾತ್ಮಕ ರೂಪಗಳಲ್ಲಿ ಚಂದ್ರಘಂಟ ಒಂದು. ಶುಂಭ ನಿಶುಂಭ ರಾಕ್ಷಸರನ್ನು ನಾಶ ಮಾಡುವ ಸಲುವಾಗಿ ಶಿವ ಮತ್ತು ಪಾರ್ವತಿ ಮಗಳಾದ ಕೌಶಿಕಿ ದೇವಿ ಎಂದು ಅವತರಿಸಿದ್ದಾಳೆ. ಕೌಶಿಕಿ ದೇವಿಯ ಸೌಂದರ್ಯವು ಎಲ್ಲ ರಾಕ್ಷಸರನ್ನು ಸಂಹರಿಸಲು ಕಾರಣವಾಯಿತು. ಈಕೆಯ ಮೂರನೆಯ ಕಣ್ಣು ಯಾವಾಗಲೂ ತೆರೆದಿರುತ್ತದೆ. ಧೈರ್ಯ ಸಾಹಸದ ಸಂಕೇತವಾಗಿದ್ದಾಳೆ. ಇಲ್ಲಿ ನೀಡುವ ಮರಣವು ಭರವಸೆ ಮತ್ತು ಸಂತೋಷವನ್ನು ಊಹಿಸುತ್ತದೆ. ಶೌರ್ಯ ಆರಾಧಿಸುವ ಮೂಲಕ ಈ ಅಭಿವ್ಯಕ್ತಿಯನ್ನು ಅನುಭವಿಸಬಹುದು.


ಕೂಷ್ಮಾಂಡ:
ನವದುರ್ಗೆಯ ನಾಲ್ಕನೇ ರೂಪ ಕೂಷ್ಮಾಂಡ. ಈಕೆ ಸೃಷ್ಟಿಕಾರಿಣಿ. ಹುಲಿ ಈಕೆಯ ವಾಹನ. ದುರ್ಗೆಯ ಪವಿತ್ರ ರೂಪಗಳಲ್ಲಿ ಒಂದಾಗಿದೆ. ಈಕೆಯನ್ನು ಆರಾಧೀಸುವವನು ಕಾಯಿಲೆ ಮತ್ತು ದುಃಖಗಳನ್ನು ನಾಶ ಮಾಡುವ ಅಧಿಕಾರವನ್ನು ಪಡೆಯುತ್ತಾನೆ. ಎಂಟೂ ಕೈಗಳಲ್ಲಿ ಶಸ್ತ್ರಸಜ್ಜಿತಳಾಗಿರುವಳು. ಹರ್ಷಚಿತ್ತದ ದೇವತೆ. ಸೂರ್ಯನಂತೆ ಸ್ವಯಂ ಪ್ರಕಾಶಮಾನಳಾಗಿದ್ದಾಳೆ.ವರ್ಣ ಮತ್ತು ವೈಭವವು ಸೂರ್ಯನಂತೆ ಅದ್ಭುತವಾಗಿದೆ. ಬ್ರಹ್ಮಾಂಡವನ್ನು ವ್ಯಾಪಿಸುವ ವೈಭವ ಈಕೆಗಿದೆ. ಕಮಲ, ಬಾಣ, ಮಸುಕು, ಬಿಲ್ಲು ರೋಸರಿ, ಜೇನುತುಪ್ಪ ಮತ್ತು ಜಲಪಾತ್ರವನ್ನು ಹಿಡಿದಿರುವ ವಿಕಿರಣ ಮಹಿಳೆಯಂತೆ ಚಿತ್ರಿಸಲಾಗಿದೆ. ಕತ್ತಲೆ ಎಲ್ಲೆಲ್ಲೂ ಮೇಲುಗೈ ಸಾಧಿಸಿದಾಗ ಅಂಧಕಾರವನ್ನು ಕಳೆದು ಬೆಳಕು ತರುವ, ಬದುಕಲು ಶಕ್ತಿ ನೀಡುವ ಶಕ್ತಿಯುವಳ್ಳವಳು.


ಸ್ಕಂದ ಮಾತ:
ಈಕೆ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಭಕ್ತಿ, ಶಕ್ತಿ ಮತ್ತು ಮಾತೃತ್ವ ದೇವತೆ. ತಾಯಿಯ ತೊಡೆಯ ಮೇಲೆ ಸ್ಕಂದ ಎಂದು ಕರೆಯಲ್ಪಡುವ ಕಾರ್ತಿಕೇಯನೊಂದಿಗೆ ಕೆಲವೊಮ್ಮೆ ಆಕೆಯನ್ನು ಗುರುತಿಸಲಾಗುತ್ತದೆ .ಸ್ಕಂದ ಮಾತಾ ಪಾತ್ರದಲ್ಲಿ ಪಾರ್ವತಿಯ ಸಿಂಹದ ಹಿಂಭಾಗದಲ್ಲಿ ತನ್ನ ವಾಹನವಾಗಿ ವರ್ತಿಸುತ್ತದೆ. ನಾಲ್ಕು ಕೈಗಳಿಂದ ಹೊಳೆಯುತ್ತಿರುವ ಮಹಿಳೆಯೆಂದು ಚಿತ್ರಿಸಲಾಗಿದೆ. ಅವುಗಳಲ್ಲಿ ಒಂದು ಕೈ ತನ್ನ ಭಕ್ತರ ಭಯಕ್ಕೆ ರಕ್ಷಣೆಯ ಭರವಸೆ ನೀಡುತ್ತದೆ.


ಕಾತ್ಯಾಯಿಣಿ:
ಕಾತ್ಯಾಯನ ಋಷಿಯ ತಪಸ್ಸಿನಿಂದ ಕಾತ್ಯಾಯಿಣಿ ಜನಿಸುತ್ತಾಳೆ. ಈಕೆಯ ಪುತ್ರ ಕಾತ್ಯ. ನವದುರ್ಗೆಯರಲ್ಲಿ ಈಕೆ ಆರನೆಯವಳು. ದುಃಖ ಮತ್ತು ಹಿಂಸಾತ್ಮಕ ಅಭಿವ್ಯಕ್ತಿ ಇದಾಗಿದೆ. ಶಕ್ತಿಯುತ ರಾಕ್ಷಸ ಮಹಿಷಾಸುರ ದೇವರನ್ನು ತಮ್ಮ ವಾಸಸ್ಥಾನದಿಂದ ಉರುಳಿಸಲು ಸ್ವರ್ಗವನ್ನು ತಲುಪಿದ್ದನು. ಮಹಿಷಾಸುರನ ವಧೆಯಾದದ್ದು ಈಕೆಯಿಂದಲೇ ಸಿಂಹದ ಮೇಲೆ ಆವರಿಸಿದ ಒಂದು ವಿಕಿರಣವಾದ ನಾಲ್ಕು ಸಶಸ್ತ್ರ ಸ್ತ್ರೀಯಂತೆ ಚಿತ್ರಿಸಲಾಗಿದೆ. ಎರಡು ಕೈಗಳು ಕಮಲ ಮತ್ತು ಕತ್ತಿಗಳನ್ನು ಹಿಡಿದುಕೊಂಡಿವೆ. ಇನ್ನೆರಡು ಕೈಗಳು ಭಕ್ತರನ್ನು ಆಶೀರ್ವದಿಸಿ ಭಯವನ್ನು ನಿರ್ಮೂಲನೆ ಮಾಡುತ್ತವೆ.


ಕಾಳರಾತ್ರಿ:
ನವದುರ್ಗೆಯರಲ್ಲಿ ಏಳನೆಯವಳು. ಕಾಳಿ, ಮಹಾಕಾಳಿ, ಭದ್ರಕಾಳಿ ಭೈರವಿ ಮೃತ್ಯು ರುದ್ರನಿ, ಚಂಡಿ, ಚಾಮುಂಡಿ ಮತ್ತು ದುರ್ಗಾ ದೇವತೆಗಳ ಹಿಂಸಾತ್ಮಕ ವಿನಾಶಕಾರಿ ಭಯಾನಕ ರೂಪಗಳಲ್ಲಿ ಒಂದಾಗಿದೆ. ಕೂದಲು ಕೆದರಿದೆ.ಮೂಗಿನ ಹೊಳ್ಳೆಯಿಂದ ಜ್ವಾಲೆ ಹೊರ ಹೊಮ್ಮುತ್ತಿದೆ. ಹೀಗೆ ನೋಡಲು ಭಯಾನಕವಾದರೂ ಭಕ್ತರಿಗೆ ವರಗಳನ್ನು ನೀಡುತ್ತಾಳೆ. ಶುಭಂಕರಿ ಎಂದೇ ಗುರುತಿಸಲ್ಪಟ್ಟಿದ್ದಾಳೆ.ವಿನಾಶದ ಮರಣ ರಾತ್ರಿ ಆಗಮಿಸಿದಾಗ ತಾನೇ ಕಾಳ ರಾತ್ರಿಯಾಗಿ ರೂಪಾಂತರಗೊಳ್ಳುತ್ತಾಳೆ. ಮಾರಣಾಂತಿಕ ಶಕ್ತಿಗಳ ನಾಶ ಮಾಡುತ್ತಾಳೆ. ದೇಹದಿಂದ ಹೊರ ಸೂಸುವ ಜ್ವಾಲೆಗಳೊಂದಿಗೆ ಕಪ್ಪು ಸ್ತ್ರೀಯಂತೆ ಚಿತ್ರಿಸಲಾಗಿದೆ. ಮಿಂಚಿನಂತೆ ಹೊಳೆಯುವ ಕಂಠೀಹಾರ ಧರಿಸಿದ್ದಾಳೆ. ಹುಲಿ ಚರ್ಮಧಾರಿಯಾಗಿದ್ದಾಳೆ. ಕತ್ತರಿಸಿದ ಮಾನವ ಕೈಗಳಿಂದ ಅಲಂಕರಿಸಲಾಗಿದೆ. ಈಕೆಯ ಮೂರು ಕಣ್ಣುಗಳು ಭೂತ ಭವಿಷ್ಯ ಮತ್ತು ಪ್ರಸ್ತುತವನ್ನು ಪ್ರತಿನಿಧಿಸುತ್ತವೆ.


ಮಹಾಗೌರಿ:
ಪಾರ್ವತಿ ದೇವಿಯ ಅತ್ಯಂತ ಹಿತಕರ ಮತ್ತು ಶಾಂತಿಯುತ ರೂಪಗಳಲ್ಲಿ ಒಂದಾಗಿದೆ.ನವದುರ್ಗೆಯರಲ್ಲಿ ಎಂಟನೆಯವಳು. ಎಂಟು ವರ್ಷದ ಮಗುವಿನಂತೆ ಮೋಹಕಳು. ನಾಲ್ಕು ಕೈಗಳಿರುವ ಸ್ತ್ರೀಯಂತೆ ಬಿಳಿಯ ಗೂಳಿಯ ಮೇಲೆ ಚಿತ್ರಿಸಲಾಗಿದೆ. ಭಕ್ತರ ಭಯವನ್ನು ನಿರ್ಮೂಲ ಮಾಡುವ ಶಕ್ತಿಯಾಗಿ ಪೂಜೆಗೊಳ್ಳುತ್ತಾಳೆ.ಶಾಂತ ಸ್ವರೂಪಳು. ಪವಿತ್ರ ಕಾಂತಿಯನ್ನು ಹೊಂದಿದ್ದಾಳೆ. ಶ್ವೇತ ಕಮಲದಷ್ಟೇ ಶುಭ್ರಳು.


ಸಿದ್ಧಿ ರಾತ್ರಿ:
ಸಿದ್ಧಿ ಅಲೌಕಿಕ ಶಕ್ತಿ ಅಥವಾ ಧ್ಯಾನ ಸಾಮರ್ಥ್ಯವನ್ನು ವ್ಯಾಖ್ಯಾನಿಸುತ್ತದೆ. ಅಣಿಮಾ, ಗರಿಮಾ, ಲಘಿಮಾ, ಪ್ರಾಪ್ತಿ,ಪ್ರಕಾಮ್ಯ ,ಐಶಿತ್ವ, ವಶಿತ್ವ ಎಂಬ ಎಂಟು ಸಿದ್ಧಿಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಈಕೆ ಎಲ್ಲ ಸಾಧನೆಗಳ ಮತ್ತು ಪರಿಪೂರ್ಣತೆಗಳ ಅಧಿದೇವತೆ.ಹೀಗಾಗಿ ದೇವ ಋಷಿಗಣಗಳಿಂದಲೂ ಪೂಜಿಸಲ್ಪಡುತ್ತಾಳೆ.


ಅತ್ಯದ್ಭುತ ಶಕ್ತಿಯನ್ನು ಹೊಂದಿದ ನವದುರ್ಗೆಯರ ಪವಾಡಗಳನ್ನು ವರ್ಣಿಸಲು ಅಸಾಧ್ಯ. ಈ ಶಕ್ತಿಗಳನ್ನು ಆರಾಧಿಸಿದವರಿಗೆ, ಧ್ಯಾನಿಸಿದವರಿಗೆ, ಪೂಜಿಸಿದವರಿಗೆ ಸರ್ವ ಶಕ್ತಿಯನ್ನು ಮೋಕ್ಷವನ್ನು ದಯಪಾಲಿಸಲಾಗುವುದು. ಯಾರು ಶ್ರದ್ಧೆ ಭಕ್ತಿಯಿಂದ ಈ ಶಕ್ತಿಗಳಿಗೆ ನಡೆದುಕೊಳ್ಳುವರೋ ಅಂಥವರಿಗೆ ನವದುರ್ಗೆಯರು ಸರ್ವದಾ ಕಾಪಾಡುವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button