Belagavi NewsBelgaum NewsKannada NewsKarnataka NewsNationalTravel

*ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ಈ ರೈಲುಗಳು ರದ್ದು*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ವಿಭಾಗದ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವಿನ ಮಾರ್ಗದಲ್ಲಿ ನಡೆಯುತ್ತಿರುವ ದ್ವಿಪಥ ಕಾಮಗಾರಿಯ ಸಲುವಾಗಿ, ನೈಋತ್ಯ ರೈಲ್ವೆಯು ಈ ಕೆಳಗಿನ ರೈಲುಗಳ ಭಾಗಶಃ ರದ್ದತಿಯನ್ನು ವಿಸ್ತರಿಸಿದೆ.

ಈ ಹಿಂದೆ ನವೆಂಬರ್ 30, 2025ರವರೆಗೆ ಭಾಗಶಃ ರದ್ದುಗೊಳಿಸಲಾಗಿದ್ದ ರೈಲು ಸಂಖ್ಯೆ 17333 ಮೀರಜ್ – ಕ್ಯಾಸಲ್ ರಾಕ್ ಡೈಲಿ  ಎಕ್ಸ್ ಪ್ರೆಸ್  ಮತ್ತು ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಡೈಲಿ  ಎಕ್ಸ್ ಪ್ರೆಸ್  ರೈಲುಗಳ ಭಾಗಶಃ ರದ್ದತಿಯನ್ನು ಈಗ ಡಿಸೆಂಬರ್ 1, 2025 ರಿಂದ ಫೆಬ್ರವರಿ 28, 2026 ರವರೆಗೆ ಮುಂದುವರಿಸಲಾಗಿದೆ.

ಈ ಅವಧಿಯಲ್ಲಿ, ರೈಲು ಸಂಖ್ಯೆ 17333 ಮೀರಜ್–ಕ್ಯಾಸಲ್ ರಾಕ್ ಡೈಲಿ  ಎಕ್ಸ್ ಪ್ರೆಸ್  ರೈಲು ಲೋಂಡಾ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಇದು ಕ್ಯಾಸಲ್ ರಾಕ್ ಬದಲಾಗಿ ಲೋಂಡಾದಲ್ಲಿ ತನ್ನ ಸಂಚಾರವನ್ನು ಕೊನೆಗೊಳಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 17334 ಕ್ಯಾಸಲ್ ರಾಕ್–ಮೀರಜ್ ಡೈಲಿ  ಎಕ್ಸ್ ಪ್ರೆಸ್  ರೈಲು ಸಹ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಇದು ಕ್ಯಾಸಲ್ ರಾಕ್ ಬದಲಿಗೆ ಲೋಂಡಾದಿಂದ ತನ್ನ ಸಂಚಾರವನ್ನು ಪ್ರಾರಂಭಿಸಲಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button