ಅಳಲು ತೋಡಿಕೊಂಡ ಮೃತ ನವೀನ್ ತಂದೆ. ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಚಾರಕ್ಕೆ ಹಚ್ಚಿದ ಘಟನೆ.
ಪ್ರಗತಿವಾಹಿನಿ ಸುದ್ದಿ, ಕೀವ್ – ಉಕ್ರೇನ್‌ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಸಿಲುಕಿ ಮಂಗಳವಾರ ಬೆಳಗ್ಗೆ ಮೃತಪಟ್ಟ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ೨೧ ವರ್ಷದ ಮೆಡಿಕಲ್ ವಿದ್ಯಾರ್ಥಿ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನವೀನ್ ದ್ವಿತೀಯ ಪಿಯುಸಿಯಲ್ಲಿ ಶೇ. ೯೭ರಷ್ಟು ಅಂಕ ಪಡೆದಿದ್ದರೂ ಅವರಿಗೆ ಭಾರತದಲ್ಲಿ ವೈದ್ಯಕೀಯ ಸೀಟ್ ಸಿಕ್ಕಿರಲಿಲ್ಲ. ಆದರೆ ಅವರಿಗೆ ಮೆಡಿಕಲ್ ಮಾಡಲೇಬೇಕು ಎಂಬ ಹಠ ಇತ್ತು, ಹಾಗಾಗಿ ಅನಿವಾರ್ಯವಾಗಿ ಉಕ್ರೇನ್‌ನಲ್ಲಿ ಎಂಬಿಬಿಎಸ್ ಓದಲು ತೆರಳಿದ್ದರು ಎಂದಿದ್ದಾರೆ.
ನವೀನ್ ತಂದೆ ಆಡಿರುವ ಮಾತು ಅವರ ದುಖಃವನ್ನು ಹೊರಹಾಕುವ ಸಂದರ್ಭದಲ್ಲಿ ಬಂದಿದೆ. ಆದರೆ ಇದು ಭಾರತೀಯ ಶಿಕ್ಷಣ ವ್ಯವಸ್ಥೆಯ ಲೋಪಗಳನ್ನು ತೆರದಿಟ್ಟಿದೆ. ಕಡಿಮೆ ಅಂಕ ಪಡೆದವರೂ ಬೇರೆ ಬೇರೆ ಕಾರಣಗಳಿಗಾಗಿ ವೈದ್ಯಕೀಯ, ಇಂಜಿನಿಯರಿಂಗ್ ಸೀಟ್ ಪಡೆಯುತ್ತಾರೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಓದುವ ಗುರಿ ಇದ್ದರೂ ಹಲವು ಕಾನೂನುಗಳು, ನಿಯಮಗಳು ಅವರ ಓದಿಗೆ ಅಡ್ಡಿ ಮಾಡುತ್ತವೆ. ಇದರಿಂದ ವಿದೇಶಗಳಲ್ಲಿ ಕಡಿಮೆ ಶುಲ್ಕದಲ್ಲಿ ಓದಲು ತೆರಳುತ್ತಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಜಾತಿ, ಮತಗಳ ಅಂತರವಿಲ್ಲದೆ, ಎಲ್ಲಾ ಜಾತಿಯ ಪ್ರತಿಭಾವಂತರಿಗೆ, ಆರ್ಥಿಕವಾಗಿ ಬಡ ವಿದ್ಯಾರ್ಥಿಗಳಿಗೆ ಓದಲು ಸಮಾನ ಅವಕಾಶ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.
ನವೀನ್ ನಿಧನದ ಬಳಿಕವಾದರೂ ಸರಕಾರ ಎಚ್ಚೆತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಇಂಥದ್ದೊಂದು ಕ್ರಾಂತಿಕಾರಕ ಹೆಜ್ಜೆಯಿಡಲಿ, ಆ ಮೂಲಕ ನವೀನ್ ಸಾವಿಗೆ ನ್ಯಾಯ ದೊರಕಲಿ ಎಂಬ ಹಕ್ಕೊತ್ತಾಯ ಕೇಳಿಬಂದಿದೆ.
ಪಾಕಿಸ್ತಾನೀಯರ ಪ್ರಾಣ ಉಳಿಸಿದ ಭಾರತದ ರಾಷ್ಟ್ರ ಧ್ವಜ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ