ನವೋದ್ಯಮಿ ಪ್ರಗತಿ ತರಬೇತಿ
ಪ್ರಗತಿವಾಹಿನಿ ಸುದ್ದಿ : ದೇಶಪಾಂಡೆ ಪ್ರತಿಷ್ಠಾನದ ನವೋದ್ಯಮಿ ಕಾರ್ಯಕ್ರಮದಡಿಯಲ್ಲಿ ದಿನಾಂಕ 25ನೇ ಜುಲೈ ನಿಂದ 27ನೇ ಜುಲೈ 2019 ವರೆಗೆ ಬೆಳಿಗ್ಗೆ 10 ರಿಂದ ಸಾಯಂಕಾಲ 4 ರವರೆಗೆ “ನವೋದ್ಯಮಿ ಪ್ರಗತಿ ತರಬೇತಿ”ಯು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಕಾರ್ಯಾಲಯ, ಕರೋಶಿಯಲ್ಲಿ ಉಚಿತವಾಗಿ ಜರಗಿತು.
ಈ ತರಬೇತಿಯಲ್ಲಿ 25 ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದು ತರಬೇತಿಯಿಂದ ಆರ್ಟಿಕಲ್ ಪೇಟಿಂಗ್, ಬಟ್ಟೆ ಪೇಟಿಂಗ್, ಡಿಸೈನ್ ವರ್ಕ್ಸ, ಗ್ಲಾಸ್ ಪೇಟಿಂಗ್ ಹೀಗೆ ಇನ್ನೂ ಹಲವು ತರಹದ ಡಿಸೈನನ್ನು ಈ ತರಬೇತಿಯಲ್ಲಿ ಕಲಿತರು.
ಈ ತರಬೇತಿಯಲ್ಲಿ ಮಹೇಶ ಭಾತೆ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಹಾಗೂ ಅವರ ಪತ್ನಿ ಗೀತಾ ಭಾತೆ, ಸಾವಿತ್ರಿ ಜ್ಯೇದ್ಯ, ಗ್ರಾಮ ಪಂಚಾಯತ್, ಉಪಾಧ್ಯಕ್ಷರು, ಕರೋಶಿ ಮತ್ತು ವಿಜಯ ಕೋಟಿವಾಲೆ, ಗಾಮ್ ಪಂಚಾಯತ್ ಸದಸ್ಯರು, ಕರೋಶಿ ಇವರು ಮಹಿಳೆಯರಿಗೆ ಪ್ರೋತ್ಸಾಹಿಸಿದರು.
ಈ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದ ಗೀತಾ ಭಾತೆಯವರು ಮಹಿಳೆಯರು ಸ್ವಾವಲಂಬಿಯಾಗಬೇಕಾದರೆ ಈ ತರಹದ ತರಬೇತಿಗಳು ಅವಶ್ಯಕ ಹಾಗೂ ಈ ಹವ್ಯಾಸವನ್ನೇ ವ್ಯವಹಾರವಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.
ಈ ಮೂರು ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸುನೀಲ ಹಿರೇಮಠ, ನವೋದ್ಯಮಿ ಕಾರ್ಯಕ್ರಮದ ಸಂಚಾಲಕ ಪರಮೇಶ್ವರ ಗಡೇದ, ನವೋದ್ಯಮಿ ಕಾರ್ಯಕ್ರಮದಲ್ಲಿ ಬಿಜ್ ಸಖಿಯಾಗಿ ಆಯ್ಕೆಯಾದ ರೇಖಾ ಮುಗಳಿ ಮತ್ತು ಭಾರತಿ ಬಡಿಗೇರವರು ಈ ತರಬೇತಿಯು ಯಶಸ್ವಿಯಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ