Kannada NewsLatest

ರಾಜಕುಮಾರ್ ಟಾಕಳೆ ನನ್ನ ಗಂಡ; ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ವಿರುದ್ಧ ಎಫ್ ಐ ಆರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದೂರು ದಾಖಲಿಸಿರುವ ರಾಜಕುಮಾರ್ ಟಾಕಳೆ ನನ್ನ ಗಂಡ ಎಂದು ನವ್ಯಶ್ರೀ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನವ್ಯಶ್ರೀ, ಕಳೆದ 15 ದಿನಗಳಿಂದ ನಾನು ಭಾರತದಲ್ಲಿ ಇರಲಿಲ್ಲ. ದುಬೈಗೆ ಹೋಗಿದ್ದೆ. ನಾನು ಬರುವಷ್ಟರಲ್ಲಿ ನನ್ನ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ನನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಇದರ ಹಿಂದೆ ಬೇರೆಯದೇ ಷಡ್ಯಂತ್ರ, ಕೈವಾಡವಿದೆ. ಎಲ್ಲಾ ದಾಖಲೆಗಳೊಂದಿಗೆ ನಾಳೆ ಮಾತನಾಡುತ್ತೇನೆ ಎಂದಿದ್ದರು. ಇದೀಗ ಹೊಸ ವರಸೆ ಆರಂಭಿಸಿರುವ ನವ್ಯಶ್ರೀ ರಾಜಕುಮಾರ್ ಟಾಕಳೆ ನನ್ನ ಗಂಡ ಎಂದಿದ್ದಾರೆ.

ಹೌದು. ಸದ್ಯಕ್ಕೆ ಎಲ್ಲರ ಪ್ರಶ್ನೆ ರಾಜಕುಮಾರ್ ಟಾಕಳೆ ಯಾರು? ಅವರು ಯಾಕೆ ನಿಮ್ಮ ವಿರುದ್ಧ ದೂರು ನೀಡಿದ್ದಾರೆ ಎಂಬುದು…ರಾಜಕುಮಾರ್ ಟಾಕಳೆ ನನ್ನ ಗಂಡ. ಅವರು ಯಾಕೆ ನನಗೆ ಮೋಸ ಮಾಡುತ್ತಿದ್ದಾರೆ…ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದಿದ್ದಾರೆ.

Home add -Advt

ಇದರ ಹಿಂದೆ ಯಾರದ್ದೋ ಕೈವಾಡ, ಷಡ್ಯಂತ್ರವಿದೆ; ಕಾಂಗ್ರೆಸ್ ನಾಯಕಿ ನವ್ಯಶ್ರೀ ಆರೋಪ

Related Articles

Back to top button