Belagavi NewsBelgaum NewsKannada NewsKarnataka NewsNational

*ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್‍ಗೆ ಎನ್‍ಸಿಸಿ ಕೆಡೆಟ್ ಆಕಾಶ ಗುಡಗೆನಟ್ಟಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕೆಎಲ್‍ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್‍ಸಿಸಿ ಘಟಕದ ಕೆಡೆಟ್ ಆಕಾಶ ಗುಡಗೆನಟ್ಟಿ ತಮಿಳನಾಡಿನ ತಿರುಚಿರಾಪಳ್ಳಿ ಜುಲೈ 2 ರಿಂದ 15 ವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಎನ್‍ಸಿಸಿ ಅಂತರ ನಿರ್ದೇಶನಾಲಯ (ಡಿಜಿ ಎನ್‍ಸಿಸಿ, ನವದೆಹಲಿ) ಶೂಟಿಂಗ್ ಚಾಂಪಿಯನ್‍ಶಿಫ್‍ಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಶೂಟಿಂಗ್ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದ 90ಕ್ಕೂ ಹೆಚ್ಚು ಎನ್‍ಸಿಸಿ ಕೆಡೆಟ್‍ಗಳಲ್ಲಿ ಆಕಾಶ ಗುಡಗೆನಟ್ಟಿ ಅಂತಿಮ ಘಟ್ಟದ ಅಗ್ರ ಶ್ರೇಯಾಂಕದ 18ರಲ್ಲಿ ಆಯ್ಕೆಯಾಗಿದ್ದಾನೆ. 

ಕೆಡೆಟ್ ಆಕಾಶ ಗುಡಗೆನಟ್ಟಿಗೆ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಬೆಳಗಾವಿ ಗ್ರುಫ್ ಕಮಾಂಡರ್ ಕರ್ನಲ್ ಮೋಹನ್ ನಾಯಕ್, 26 ಕರ್ನಾಟಕ ಎನ್‍ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಎಸ್. ದರ್ಶನ್, ಎಡಮ್ ಆಫೀಸರ್ ಶಂಕರ ಯಾದವ್, ಸುಬೇದಾರ್ ಮೇಜರ್ ಕಲ್ಲಪ್ಪಾ ಪಾಟೀಲ, ಕೆಎಲ್‍ಇ ಜಂಟಿ ಕಾರ್ಯದರ್ಶಿ ಡಾ. ಪ್ರಕಾಶ್ ಕಡಕೋಳ, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್. ಮೇಲಿನಮನಿ, ಕಾಲೇಜಿನ ಎನ್‍ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button