Latest

ದೆಹಲಿ ಗ್ಯಾಂಗ್ ರೇಪ್ ರೀತಿಯಲ್ಲೇ ನಡೆಯಿತು ಮತ್ತೊಂದು ಘೋರ ಘಟನೆ

ಪ್ರಗತಿವಾಹಿನಿ ಸುದ್ದಿ; ಲಕ್ನೋ: 2012ರಲ್ಲಿ ದೆಹಲಿಯಲ್ಲಿಯಲ್ಲಿ ನಡೆದಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಮಾದರಿಯಲ್ಲೇ ಮತ್ತೊಂದು ಭಯಾನಕ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಚಲಿಸುತ್ತಿದ್ದ ಬಸ್ ನಲ್ಲೇ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘೋರ ಘಟನೆ ಗೌತಮ ಬುದ್ಧ ನಗರದಲ್ಲಿ ನಡೆದಿದೆ.

ಬಸ್​ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ರಾತ್ರಿ ಪ್ರತಾಪಘಡದಿಂದ ನೊಯ್ಡಾಗೆ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಅದರೂ ಬಸ್​ನಲ್ಲಿ ಹಲವು ಪ್ರಯಾಣಿಕರಿದ್ದಾಗ್ಯೂ ಈ ಘಟನೆ ನಡೆದಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಸಂತ್ರಸ್ತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರತಾಪಘಡದಿಂದ ನೊಯ್ಡಾಗೆ ಬಸ್ ನಲ್ಲಿ ಪ್ರಯಾಣಿಸಿದ್ದಾಳೆ. ಬಸ್​ನಲ್ಲಿದ್ದ ಇಬ್ಬರು ಚಾಲಕರ ಪೈಕಿ ಒಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಇನ್ನೋರ್ವ ಚಾಲಕನೂ ಅತ್ಯಾಚಾರ ನಡೆಸಿದ್ದಾನೆ. ಪ್ರತಾಪಘಡದಿಂದ ನೊಯ್ಡಾಗೆ ಬಹಳ ದೂರ ಪ್ರಯಾಣವಾದ್ದರಿಂದ ಬಸ್​ನಲ್ಲಿ ಇಬ್ಬರು ಡ್ರೈವರ್​ಗಳಿದ್ದರು. ಅಲ್ಲದೇ ಬಸ್ ನಲ್ಲಿದ್ದ ಇನ್ನೂ 12 ಪ್ರಯಾಣಿಕರು ನಿದ್ರೆಗೆ ಜಾರಿದ್ದರು. ಈ ವೇಳೆ ಬಸ್ ಚಾಲಕರು ಮಹಿಳೆ ಮೇಲೆ ವಿಕೃತಿ ಮೆರೆದಿದ್ದಾರೆ.

ಬಸ್ ನಿಂದ ಇಳಿದ ಮಹಿಳೆ ಪತಿಯ ಬಳಿ ಘಟನೆ ಬಗ್ಗೆ ತಿಳಿಸಿದ್ದು, ಪತಿ ಪತ್ನಿ ಇಬ್ಬರೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳೀಯರ ಸಹಾಯದಿಂದ ಇಬ್ಬರು ಬಸ್ ಚಾಲಕರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

Home add -Advt

Related Articles

Back to top button