ನೆರೆ ಸಂತ್ರಸ್ತ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಸಹಾಯ ಅವಶ್ಯ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಪ್ರವಾಹದಿಂದಾಗಿ ಶಾಲೆಗಳ ದಾಖಲಾತಿಗಳು, ಪೀಠೋಪಕರಣಗಳು, ಆಟೋಪಕರಣಗಳು, ಗ್ರಂಥಾಲಯ, ಪ್ರಯೋಗಾಲಯದ ವಸ್ತುಗಳಿಗೆ ಹಾನಿಯಾಗಿದೆ. ವಿದ್ಯಾರ್ಥಿಗಳ ಸಮವಸ್ತ್ರ, ಶಾಲಾ ಬ್ಯಾಗ್ ಪಠ್ಯಪುಸ್ತಕಗಳು ಹಾಳಾಗಿವೆ, ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಲು ಸಹಾಯಕವಾಗುವ ನಿಟ್ಟಿನಲ್ಲಿ ನರೆಹೊರೆಯವರ ಸಹಾಯ ಸಹಕಾರ ಅತ್ಯಾವಶ್ಯಕವಾಗಿದೆ ಎಂದು ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್ ಎ ನಾಡಗೌಡರ ಹೇಳಿದರು.
ಅವರು ಸಮೀಪದ ಪಟಗುಂದಿ, ಲಕ್ಷ್ಮೀನಗರ, ಮರಡಿ ಸಿದ್ಧೇಶ್ವರ ಮುರಿ ಶಾಲೆಗಳಿಗೆ ಭಾಗೋಜಿ ಕೊಪ್ಪ ಗ್ರಾಮದಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ, ನೋಟ್ ಬುಕ, ಪೆನ್ ವಿತರಿಸಿ ಮಾತನಾಡಿದರು. ಪ್ರವಾಹ ಪರಿಸ್ಥಿತಿಯನ್ನು ಕಂಡಿರುವ ಮಕ್ಕಳು ಹೆದರುವ ಅವಶ್ಯಕತೆ ಇರುವದಿಲ್ಲ. ಇಲಾಖೆ ಹಾಗೂ ಸಾರ್ವಜನಿಕರ ಸಹಾಯದ ಮೇಲೆ ಪುನಃ ಶಾಲಾ ಪರಿಸರವನ್ನು ಮೊದಲಿನಂತಾಗಲು ಶ್ರಮಿಸುತ್ತಿದೆ. ಅಪಾಯದ ಕಟ್ಟಡಗಳು, ಸಾಂಕ್ರಾಮಿಕ ರೋಗಗಳು ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಶಾಲಾ ಪರಿಸರದಲ್ಲಿ ಅನುಸರಿಸ ಬೇಕೆಂದು ನುಡಿದರು.
ಕಲಿಕಾ ಪರಿಕರ ವಿತರಣೆ ಸಂದರ್ಭದಲ್ಲಿ ಭಾಗೋಜಿಕೊಪ್ಪದ ಗುರುಪುತ್ರಯ್ಯ ಹಿರೇಮಠ ಮಹಾಸ್ವಾಮೀಜಿ, ಸಿ.ಆರ್.ಪಿ ಟಿ.ಎಸ್ ಜೋಲಾಪೂರೆ, ಎಸ್.ಡಿ.ಎಮ್.ಸಿ ಅಧ್ಯಕ್ಷ ಎಸ್ ಬಿ ಪೂಜೇರ, ಬಸಲಿಂಗಪ್ಪ ಪಟ್ಟಣಶೆಟ್ಟಿ, ಫಕ್ರುಸಾಬ ಯಲಿಗಾರ, ಶ್ರೀನಿವಾಸ ಎಸ್ ಎಮ್, ಉಮೇಶಗೌಡ ಪಾಟೀಲ, ಸದಾಶಿವ ಕಪ್ಪತ್ತಿ, ಮಾಬುಸಾಬ ಯಲಿಗಾರ, ಮೀರಾಸಾಬ ಯಲಿಗಾರ, ಲಕ್ಕಪ್ಪ ಸುನಗಾರ, ಲಕ್ಷ್ಮಣ ಬಿರಂಜಿ, ಶಿವಾನಂದ ಕಂಬಾರ, ಬಸವರಾಜ ಕೇಳಗೇರಿ ಹಾಗೂ ಶಿಕ್ಷಕರು ಮಕ್ಕಳು ಗ್ರಾಮಸ್ಥರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ