ಬುಧವಾರ ಕರ್ನಾಟಕ -ಮಹಾರಾಷ್ಟ್ರ ಇನ್ವೆಸ್ಟರ್ಸ್ ಮೀಟ್ -ಸಚಿವ ಶೆಟ್ಟರ್ ಉಪಸ್ಥಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ರಾಜ್ಯ ಕೈಗರಿಕೆ ಸಚಿವ ಜಗದೀಶ ಶೆಟ್ಟರ್ ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಕೈಗಾರಿಕೆ ಸಚಿವರಾದ ನಂತರ ಶೆಟ್ಟರ್ ಅವರ ಮೊದಲ ಬೆಳಗಾವಿ ಭೇಟಿ ಇದು.
ಶೆಟ್ಟರ್ ಅವರು ಬುಧವಾರ ಕರ್ನಾಟಕ -ಮಹಾರಾಷ್ಟ್ರ ರಾಜ್ಯಗಳ ಬಂಡವಾಳ ಹೂಡಿಕೆದಾರರ ಸಭೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಹೊಟೆಲ್ ಮ್ಯಾರಿಯೆಟ್ ನಲ್ಲಿ ಇನ್ವೆಸ್ಟರ್ಸ್ ಮೀಟ್ ಆಯೋಜಿಸಲಾಗಿದೆ.
ಮಹಾರಾಷ್ಟ್ರ ಉದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿರುವುದರಿಂದ ಅವರೊಂದಿಗೆ ಸಚಿವರು ಚರ್ಚಿಸಲಿದ್ದಾರೆ. ಜೊತೆಗೆ ಈ ಭಾಗದ ಉದ್ಯಮಿಗಳ ಸಮಸ್ಯೆ ಕುರಿತು ಅಹವಾಲು ಆಲಿಸಲಿದ್ದಾರೆ.
ಮಹಾರಾಷ್ಟ್ರ ಉದ್ಯಮಿಗಳು ಕರ್ನಾಟಕದಲ್ಲಿ ಬಂಡವಾಲ ಹೂಡಲು ಆಸಕ್ತಿ ತೋರಿಸಿದ್ದರಿಂದ ಕಣಗಲಾ ಬಳಿ ಈಗಾಗಲೆ ಬೃಹತ್ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳೊಂದಿಗೆ ಮಹಾರಾಷ್ಟ್ರ ಉದ್ಯಮಿಗಳಿಗೆ ರೆಡ್ ಕಾರ್ಪೆಟ್ ಹಾಸಲು ಕರ್ನಾಟಕ ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಈ ಸಭೆ ಮಹತ್ವದ್ದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ