ಪ್ರಗತಿವಾಹಿನಿ ಸುದ್ದಿ: ಒಲಿಂಪಿಕ್ಸ್ 2024 ರ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ.
ಚಿನ್ನ ಗೆಲ್ಲುವ ನೀರಿಕ್ಷೆಯಲ್ಲಿದ ನೀರಜ್ ಅವರು ಬೆಳ್ಳಿ ಗೆದ್ದಿದ್ದಾರೆ. ಮೊದಲ ಪ್ರಯತ್ನದಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಕಾಲು ಗೆರೆ ತಾಗಿದ್ದರ ಪರಿಣಾಮ ಫೌಲ್ ಆಗಿ ವಿಫಲರಾಗಿದ್ದರು. ಆದರೆ 2ನೇ ಪ್ರಯತ್ನದಲ್ಲಿ 89.45 ಮೀಟರ್ ಗಳಿಗೆ ಭರ್ಜಿ ಎಸೆದಿದ್ದರು. 3ನೇ ಪ್ರಯತ್ನದಲ್ಲಿ ಮತ್ತೆ ಫೌಲ್ ಆಗಿದ್ದರು.
ಪಾಕಿಸ್ತಾನದ ಅರ್ಶದ್ ನದೀಮ್ ಮೊದಲ ಪ್ರಯತ್ನದಲ್ಲೇ 92.97 ಮೀಟರ್ ಭರ್ಜಿ ಎಸೆದು ಒಲಿಂಪಿಕ್ಸ್ ದಾಖಲೆಯನ್ನು ಮುರಿದು, ಚಿನ್ನದ ಪದಕ ಗೆದ್ದರು. ಈ ನಂತರದ ಸ್ಥಾನದಲ್ಲಿ ನೀರಜ್ ಚೋಪ್ರಾ ಇದ್ದರು. 3,4,5 ನೇ ಪ್ರಯತ್ನದಲ್ಲಿಯೂ ನೀರಜ್ ಚೋಪ್ರಾ ಫೌಲ್ ಆದರು. ಜರ್ಮನಿಯ ಜೂಲಿಯನ್ ವೆಬರ್ 87.33 ಮೀಟರ್ ಭರ್ಜಿ ಎಸೆಯುವ ಮೂಲಕ 3 ನೇ ಸ್ಥಾನ ಪಡೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ