ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಇಂದೆಂತಹ ದುರಂತ. ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನ ನೊಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗನ ಸಾವಿನ ಬೆನ್ನಲ್ಲೇ ತಂದೆಯೂ ದುಡುಕಿನ ನಿರ್ಧಾರ ಕೈಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
19 ವರ್ಷದ ಜಗದೀಶ್ವರ್ ಎರಡನೇ ಬಾರಿಯೂ ನೀಟ್ ಪರೀಕ್ಷೆಯಲ್ಲಿ ಫೇಲಾಗಿದ್ದನ್ನು ತಿಳಿದು, ಶನಿವಾರ ಚೆನ್ನೈನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಸಾವು ತಂದೆಗೆ ಆಘಾತವನ್ನುಂಟು ಮಾಡಿದೆ. ದು:ಖದಲ್ಲೇ ಮಗನ ಅಂತ್ಯಸಸ್ಕಾರವನ್ನು ನೆರವೇರಿಸಿ ಮನೆಗೆ ವಾಪಸ್ ಆಗಿದ್ದ ತಂದೆ ನೋವಿವಿನಿಂದ ಕುಸಿದು ಹೋಗಿದ್ದರು.
ಮಗನ ಅಂತ್ಯಕ್ರಿಯೆ ಮುಗಿದ ಕೆಲವೇ ಗಂಟೆಗಳಲ್ಲಿ ತಂದೆಯೂ ನೇಣಿಗೆ ಕೊರಳೊಡ್ಡಿದ್ದಾರೆ. ಪೊಲೀಸರು ಹೇಳುವ ಪ್ರಕಾರ ಮಗ ಜಗದೀಶ್ವರ್ ಖಾಸಗಿ ನೀಟ್ ಬೋದನಾ ಕೇಂದ್ರದಲ್ಲಿ ಪರೀಕ್ಷೆಗಾಗಿ ಕೋಚಿಂಗ್ ಪಡೆದಿದ್ದ. ಎರಡನೇ ಬಾರಿ ನೀಟ್ ನಲ್ಲಿ ಫೇಲಾಗಿದ್ದಕ್ಕೆ ಮನನೊಂದಿದ್ದ. ಆದರೆ ತಂದೆ ಹಾಗೂ ಮನೆಯವರು ಮೂರನೇ ಬಾರಿ ನೀಟ್ ಬರೆಯಲು ಮತ್ತೊಂದು ಕೋಚಿಂಗ್ ಸೆಂಟರ್ ಗೆ ಸೇರಿಸಲು ಅರ್ಜಿಯನ್ನು ತುಂಬಿಸಿದ್ದರು. ಆದರೆ ತಾನು ನೀಟ್ ನಲ್ಲಿ ಪಾಸ್ ಆಗಲು ಸಾಧ್ಯವೇ ಇಲ್ಲ ಎಂದು ಮಾನಸಿಕವಾಗಿ ಕುಗ್ಗಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನಿಂದ ನೊಂದು ತಂದೆಯೂ ಸಾವಿಗೆ ಶರಣಾಗಿದ್ದಾರೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ