ಪ್ರಗತಿವಾಹಿನಿ ಸುದ್ದಿ; ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಥಾಣೆ ಮೂಲದ ಒಂದೇ ಕುಟುಂಬದ ನಾಲ್ವರು ಸೇರಿದಂತೆ 72 ಜನರು ಸಜೀವದಹನಗೊಂಡಿದ್ದಾರೆ.
ಯೇಟಿ ಏರ್ ಲೈನ್ಸ್ ಗೆ ಸೇರಿದ ವಿಮಾನ ಕಠ್ಮಂಡು ಏರ್ ಪೋರ್ಟ್ ನಿಂದ ಪೊಖಾರಾ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಸೇತಿ ನದಿಯಲ್ಲಿ ಈ ದುರಂತ ಸಂಭವಿಸಿದ್ದು, ವಿಮಾನ ಪತನಗೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ ಐವರು ಭಾರತೀಯ ಪ್ರಯಾಣಿಕರು ಇದ್ದರು. ಐವರು ಭಾರತೀಯರು ಸೇರಿದಂತೆ ಎಲ್ಲಾ 72 ಜನರು ಸಜೀವ ದಹನಗೊಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ 10:30ಕ್ಕೆ ವಿಮಾನ ಕಠ್ಮಂಡು ವಿಮಾನ ನಿಲ್ದಾಣದಿಂದ ಟೆಕಾಫ್ ಆಗಿದೆ. ಟೇಕ್ ಆಫ್ ಆದ 20 ನಿಮಿಷಗಳಲ್ಲಿ ಪತನಗೊಂಡಿದೆ. ಪೋಖರಾ ವಿಮನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಲು ಕೇವಲ 5 ನಿಮಿಷವಿರುವಾಗ ಪತನಗೊಂಡ ವಿಮಾನ ಧಗಧಗನೆ ಹೊತ್ತಿ ಉರಿದಿದ್ದು, ಅವಶೇಷಗಳು ಸೇತಿ ನದಿಯಲ್ಲಿ ಬಿದ್ದಿವೆ. ವಿಮಾನದಲ್ಲಿನ ತಾಂತ್ರಿಕ ದೋಷದಿಂದಾಗಿ ದುರಂತ ಸಂಭವಿಸಿರಬಹುದು ಎನ್ನಲಾಗಿದೆ.
ವಿಮಾನದಲ್ಲಿ ನಾಲ್ವರು ಸಿಬ್ಬಂದಿಗಳು, ಐವರು ಭಾರತೀಯ ಪ್ರಯಾಣಿಕರು, 53 ಜನ ನೇಪಾಳಿ ಪ್ರಯಾಣಿಕರು, ಜರ್ಮನಿಯ ಇಬ್ಬರು, ಕೊರಿಯಾದ ಇಬ್ಬರು, ಐರ್ಲ್ಯಾಂಡ್ ನ ಓರ್ವ, ರಷ್ಯಾದ ನಾಲ್ವರು, ಅರ್ಜಂಟೀನಾ, ಫಾನ್ಸ್ ಮೂಲದ ತಲಾ ಒಬ್ಬರು ಸೇರಿ 72 ಜನರು ದುರ್ಮರಣಕ್ಕೀಡಾಗಿದ್ದಾರೆ. ಮೃತರಲ್ಲಿ ನಾಲ್ವರು ಹಸುಳೆಗಳು, ಮೂವರು ಮಕ್ಕಳು ಸೇರಿದ್ದಾರೆ.
ಸಾವನ್ನಪ್ಪಿದ ಐವರು ಭಾರತಿಯರಲ್ಲಿ ನಾಲ್ವರು ಮಹಾರಾಷ್ಟ್ರದ ಥಾಣೆ ಮೂಲದ ಒಂದೇ ಕುಟುಂಬದವರಾಗಿದ್ದು, ಅವರನ್ನು ಅಶೋಕ್ ಕುಮಾರ್ ತ್ರಿಪಾಠಿ, ಪತ್ನಿ ವೈಭವಿ ಭಾಂಡೇಕರ್ ಹಾಗೂ ಮಕ್ಕಳಾದ ಧನುಷ್, ರಿತಿಕಾ ಎಂದು ಗುರುತಿಸಲಾಗಿದೆ.
*ಭೀಕರ ವಿಮಾನ ದುರಂತ: 35ಕ್ಕೂ ಹೆಚ್ಚು ಪ್ರಯಾಣಿಕರ ದುರ್ಮರಣ*
https://pragati.taskdun.com/nepalapokhara-international-airportflight-crash35-passenger-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ