*ಕಿರಿಯ ಉದ್ಯೋಗಿ ಜೊತೆ ಪ್ರಣಯ ಸಂಬಂಧ ಹೊಂದಿದ ನೆಸ್ಲೆ ಸಿಇಒಗೆ ಗೇಟ್ ಪಾಸ್*

ಪ್ರಗತಿವಾಹಿನಿ ಸುದ್ದಿ: ನೆಸ್ಲೆ ತನ್ನ ಸಿಇಓ ಲಾರೆಂಟ್ ಫ್ರೀಕ್ಸೆ ಅವರು ಕಿರಿಯ ಉದ್ಯೋಗಿಯೊಂದಿಗೆ ರಹಸ್ಯ “ಪ್ರಣಯ ಸಂಬಂಧ” ಹೊಂದುವ ಮೂಲಕ ಕಂಪನಿಯ ನೀತಿಯನ್ನು ಉಲ್ಲಂಘಿಸಿದ್ದಾರೆ ಎಂದು ಅಂತರಿಕ ತನಿಖೆ ದೃಢಪಡಿಸಿದ ನಂತರ ಅವರನ್ನು ಕಂಪನಿಯ ಸಿಇಓ ಸ್ಥಾನದಿಂದ ವಜಾಗೊಳಿಸಿದೆ.
ಸ್ವಿಸ್ ಆಹಾರ ದೈತ್ಯ ಸಂಸ್ಥೆಯ ವಿಸ್ಲ್‌ಬ್ಲೋಯಿಂಗ್ ಚಾನೆಲ್ ಮೂಲಕ ದೂರು ಸಲ್ಲಿಸಿದ ನಂತರ ವಿಚಾರಣೆ ಪ್ರಾರಂಭವಾಯಿತು ಎಂದು ಬಿಬಿಸಿ ವರದಿ ಮಾಡಿದೆ.
ಲಾರೆಂಟ್ ಫ್ರೀಕ್ಸ್ ಅವರನ್ನು ತೆಗೆದುಹಾಕಿದ ಬಳಿಕ ಫಿಲಿಪ್ ನವರಾಟಿಲ್ ಅವರು ಹೊಸ CEO ಆಗಿ ಅಧಿಕಾರ ವಹಿಸಿಕೊಂಡರು.
ನೇರ ಅಧೀನ ಸಹೋದ್ಯೋಗಿ ಜತೆ ರಹಸ್ಯ ಪ್ರೇಮ ಸಂಬಂಧ ಹೊಂದಿರುವ ಬಗ್ಗೆ ತನಿಖೆ ನಡೆಸಿದ ಬಳಿಕ ಇದು ನೆಸ್ಲೆಯ ವ್ಯವಹಾರ ಸಂಹಿತೆಯ ಉಲ್ಲಂಘನೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾ ಮಾಡಲಾಗಿದೆ” ಎಂದು ಸಂಸ್ಥೆ ಅಧಿಕೃತ ಹೇಳಿಕೆ ನೀಡಿದೆ.
ಅಧ್ಯಕ್ಷ ಪಾಲ್ ಬ್ಲೂಕ್ ಮತ್ತು ಮುಖ್ಯ ಸ್ವತಂತ್ರ ನಿರ್ದೇಶಕ ಪ್ಯಾಬ್ಲೊ ಇಸ್ಲಾ ಅವರ ಮೇಲ್ವಿಚಾರಣೆಯಲ್ಲಿ ಈ ತನಿಖೆ ನಡೆದಿದ್ದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.