ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮರದಲ್ಲಿ ಪತ್ತೆಯಾಗಿದ್ದ ನವಜಾತ ಶಿಶು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗುವಿನ ಜನ್ಮಕ್ಕೆ ಕಾರಣರಾದ ಆರೋಪಿ ಯುವಕನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಯುವಕನನ್ನು ಬಂಧಿಸಿರುವ ಖಾನಾಪುರ ಠಾಣೆ ಪೊಲೀಸರು ಅಪ್ರಾಪ್ತೆಯನ್ನು ರಕ್ಷಿಸಿದ್ದಾರೆ. 19 ವರ್ಷದ ಮಲ್ಲು ಅಪ್ಪಿ ಪಿಂಗಳೆ ಬಂಧಿತ ಆರೋಪಿ. ನೆರಸಾ ಗೌಳಿವಾಡ ಗ್ರಾಮದ ನಿವಾಸಿ.
ಆಗಸ್ಟ್ 25ರಂದು ಖಾನಾಪುರದಲ್ಲಿ ನವಜಾತ ಶಿಶುವೊಂದು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಮರದಲ್ಲಿ ಇಟ್ಟು ಹೋಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗು ಅಳುವ ಶಬ್ಧ ಕೇಳಿ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ಎಂಬುವವರು ಮಗುವನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಭಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಮಗುವಿಗೆ ಭಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣ ಭೇದಿಸಿರುವ ಪೊಲೀಸರು ಮಗುವಿನ ತಂದೆ-ತಾಯಿ ಪತ್ತೆ ಹಚ್ಚಿದ್ದಾರೆ. ಆರೋಪಿ ಮಲ್ಲು, ಅಪ್ರಾಪ್ತ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು ಆಕೆಯನ್ನು ಗರ್ಭವತಿ ಮಾಡಿದ್ದಲ್ಲದೇ ಮಗು ಹುಟ್ಟಿದ ಬಳಿಕ ಮಗುವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಮರದಲ್ಲಿ ಇಟ್ಟು ಹೋಗಿದ್ದ. ಇದೀಗ ಅರೋಪಿ ಬಂಧಿಸಿ, ಅಪ್ರಾಪ್ತೆಯನ್ನು ರಕ್ಷಿಸಲಾಗಿದೆ.
ಮುರುಘಾಶ್ರೀಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಜಡ್ಜ್ ಸೂಚನೆ
https://pragati.taskdun.com/latest/murughashreeappear-courtimmediatly/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ