
ಪ್ರಗತಿವಾಹಿನಿ ಸುದ್ದಿ: ಅದೇಷ್ಟೋ ಜನರು ಮಕ್ಕಳಿಲ್ಲ ಎಂಬ ಕೊರಗಲ್ಲಿ ಕಂಡ ಕಂಡ ದೇವರಿಗೆ ಹರಕೆ ಹೊತ್ತು, ಆಸ್ಪತ್ರೆಗಳಿಗೆ ಅಲೆದಾಡಿ ಚಿಕಿತ್ಸೆ ಪಡೆದು ಮಕ್ಕಳನ್ನು ಪಡೆಯುತ್ತಾರೆ. ಆದರೆ ಈ ಪೋಷಕರಿಗೆ ಹುಟ್ಟಿದ ಮಗುವೇ ಒಂದೇ ದಿನದಲ್ಲಿ ಬೇಡವಾಗಿದೆ. ಕಂದಮ್ಮನನ್ನು ಜೀವಂತವಾಗಿಯೇ ಹೂತು ಹಾಕುವಷ್ಟರ ಮಟ್ಟಿಗೆ ಮನುಷತ್ವವನ್ನೂ ಕಳೆದುಕೊಂಡಿದ್ದಾರೆ ದುರುಳರು.
ಹುಟ್ಟಿದ ಒಂದು ದಿನದ ಮಗುವನ್ನು ಜೀವಂತವಾಗಿ ಮಣ್ಣಿನಲ್ಲಿ ಹೂತು ಹಾಕಿರುವ ಘೋರ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿಣ್ಣೆ ಗ್ರಾಮದಲ್ಲಿ ನಡೆದಿದೆ.
ಒಂದು ದಿನದ ಗಂಡು ಮಗುವನ್ನು ದುರುಳರು ಜೀವಂತವಾಗಿ ಮಣ್ಣಿನಲ್ಲಿ ಹೂತಿಟ್ಟಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿ ನವಜಾತ ಶಿಶುವನ್ನು ರಕ್ಷಿಸಿ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ನವಜಾತ ಶಿಶುವಿಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ