Latest

ಖಾಸಗಿ ಶಾಲಾ ಶಿಕ್ಷಕಿಗೆ ಹೊಸ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ವಿಜಯವಾಡ: ಯುಕೆಯಲ್ಲಿನ ರೂಪಾಂತರ ಕೊರೊನಾ ವೈರಸ್ ರಾಜಮಂಡ್ರಿಯಲ್ಲಿನ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಲ್ಲಿ ಪತ್ತೆಯಾಗಿದೆ.

ಪೂರ್ವ ಗೋದಾವರಿ ರಾಜಮಂಡ್ರಿ ಮೂಲದ ಖಾಸಗಿ ಶಾಲಾ ಶಿಕ್ಷಕಿ ಆಂಗ್ಲೋ-ಇಂಡಿಯನ್ ಮಹಿಳೆ ಮೇರಿ ವಿನ್ ಫ್ರೆಡ್ ಆನ್ ಹೊಸ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Home add -Advt

ರಾಜಮಂಡ್ರಿಯ ರಾಮಕೃಷ್ಣನಗರ ನಿವಾಸಿಯಾಗಿರುವ ಅವರು ಡಿಸೆಂಬರ್ 21ರಂದು ಲಂಡನ್ ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ಆರ್ ಟಿಪಿಸಿ ಆರ್ ಪರೀಕ್ಷೆಗೆ ಒಳಪಟ್ಟಿದ್ದರು. ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆದರೆ ಮೇರಿ ಕ್ವಾರಂಟೈನ್ ಕೇಂದ್ರದಿಂದ ತಪ್ಪಿಸಿಕೊಂಡು ದೆಹಲಿಯಿಂದ ರಾಜಮಂಡ್ರಿಗೆ ರೈಲಿನಲ್ಲಿ ತೆರಳುತ್ತಿದ್ದಾಗ ಪತ್ತೆಹಚ್ಚಲಾಗಿದೆ.

ಸದ್ಯ ಅವರನ್ನು ರಾಜಮಂಡ್ರಿಗೆ ಕರೆತರಲಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಪೂರ್ವಗೋದಾವರಿ ಜಿಲ್ಲಾ ಸಂಯೋಜಕ ಡಾ.ಟಿ.ರಮೇಶ್ ಕುಮಾರ್ ತಿಳಿಸಿದ್ದಾರೆ.

 

Related Articles

Back to top button