Cancer Hospital 2
Beereshwara 36
LaxmiTai 5

*ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಧಿಕಾರ ಸ್ವೀಕಾರ*

Anvekar 3
GIT add 2024-1

ಪ್ರಗತಿವಾಹಿ‌ನಿ ಸುದ್ದಿ, ಬೆಳಗಾವಿ:  ಬೆಳಗಾವಿಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ರೋಷನ್ ಅವರು ಶುಕ್ರವಾರ(ಜು.5) ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರವನ್ನು ಹಸ್ತಾಂತರಿಸಿದರು.

2015 ನೇ ಬ್ಯಾಚಿನ ಐ.ಎ.ಎಸ್. ಅಧಿಕಾರಿಯಾಗಿರುವ ಮೊಹಮ್ಮದ್ ರೋಷನ್ ಅವರು, ಈ ಮುಂಚೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬಿ.ಟೆಕ್ ಹಾಗೂ ಎಂ.ಬಿ.ಎ.(ಫೈನಾನ್ಸ್), ಎಂ.ಎ.(ಪಬ್ಲಿಕ್ ಪಾಲಿಸಿ) ಪದವೀಧರರಾಗಿರುವ ರೋಷನ್, ಹಾವೇರಿ ಮತ್ತು ಉತ್ತಕ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿರುತ್ತಾರೆ.

Emergency Service

ಕಳೆದ ಎರಡು(5-5-2022) ವರ್ಷಗಳಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆಡಳಿತಲ್ಲಿ ಚುರುಕು ತಂದಿದ್ದ ನಿತೇಶ್ ಪಾಟೀಲ ಅವರು, ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆ ನಿರ್ದೇಶಕರಾಗಿ ವರ್ಗಾವಣೆಗೊಂಡಿರುತ್ತಾರೆ.

ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ನಿರ್ಗಮಿತ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರಿಗೆ ಶುಭಕೋರಿದರು. ಇದೇ ವೇಳೆ ನೂತನ ಜಿಲ್ಲಾಧಿಕಾರಿಗಳಿಗೆ ಹೂಗುಚ್ಛ ನೀಡಿ ಬರಮಾಡಿಕೊಂಡರು. ಪ್ರೊಬೇಷನರಿ ಐ.ಎ.ಎಸ್. ದಿನೇಶ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.

Bottom Add3
Bottom Ad 2