Latest

ಆಟೋರಿಕ್ಷಾ ಅಗ್ರಿಗೇಟರ್ ಗಳಿಗೆ ಹೊಸ ದರ ನಿಗದಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ಕರ್ನಾಟಕ ಸಾರಿಗೆ ಇಲಾಖೆ  ಶುಕ್ರವಾರ ರಾಜ್ಯದಾದ್ಯಂತ ಆಟೋರಿಕ್ಷಾ ಅಗ್ರಿಗೇಟರ್‌ಗಳಿಗೆ ಹೊಸ ದರ  ನಿಗದಿಪಡಿಸಿದೆ.

ಆ್ಯಪ್ ಆಧಾರಿತ ಆಟೋರಿಕ್ಷಾ ಅಗ್ರಿಗೇಟರ್‌ಗಳು ತಮ್ಮ ಆ್ಯಪ್‌ಗಳಲ್ಲಿ ಬುಕ್ ಮಾಡಿದ ಆಟೋ ರೈಡ್‌ಗಳಿಗೆ ರಾಜ್ಯ ನಿಗದಿಪಡಿಸಿದ ಮೂಲ ದರ(ಮೊದಲ 2 ಕಿಮೀಗೆ  30ರೂ.)  ಕ್ಕಿಂತ ಶೇ.5 ರಷ್ಟು ಶುಲ್ಕ ವಿಧಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

Home add -Advt

ಈ ಹಿಂದೆ, ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಅಗ್ರಿಗೇಟರ್‌ಗಳಿಗೆ ಮೂಲ ಶುಲ್ಕ ಮತ್ತು ಅನ್ವಯವಾಗುವ ತೆರಿಗೆಗಳ ಮೇಲೆ ಶೇ.10 ರಷ್ಟು ಕಾರ್ಯನಿರ್ವಹಿಸಲು ಅವಕಾಶ ನೀಡಿತ್ತು. 2021 ರಲ್ಲಿ, ಕರ್ನಾಟಕ ಸರಕಾರವು ಮೊದಲ ಎರಡು ಕಿಲೋಮೀಟರ್‌ಗಳಿಗೆ ಕನಿಷ್ಠ ದರವಾಗಿ  30ರೂ. ಮತ್ತು ಹೆಚ್ಚುವರಿ ಕಿಮೀಗೆ  15 ರೂ. ಎಂದು ನಿಗದಿಪಡಿಸಿತು. ಆದಾಗ್ಯೂ, ಅಗ್ರಿಗೇಟರ್‌ಗಳು ಪ್ರಯಾಣಿಕರಿಂದ ಹೆಚ್ಚು ಶುಲ್ಕ ವಿಧಿಸುತ್ತಿದ್ದರು.

ಆನ್‌ಲೈನ್ ಅಪ್ಲಿಕೇಶನ್‌ಗಳ ಅಡಿಯಲ್ಲಿ ಲಭ್ಯವಿರುವ ಆಟೋರಿಕ್ಷಾಗಳು ಮತ್ತು ಕ್ಯಾಬ್ ಸೇವೆಗಳು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ ಎಂದು ಅಕ್ಟೋಬರ್ 6 ರಂದು ಸಾರಿಗೆ ಇಲಾಖೆಯು ಈ ವಿಷಯಕ್ಕೆ ಸಂಬಂಧಿಸಿದ ಸಂಗ್ರಾಹಕರಿಗೆ ನೊಟೀಸ್ ನೀಡಿತ್ತು. ಆಟೊಗಳನ್ನು ಓಡಿಸುವುದನ್ನು ನಿಲ್ಲಿಸಿ ಪ್ರತ್ಯೇಕ ತ್ರಿಚಕ್ರ ವಾಹನ ಪರವಾನಗಿಗೆ ಅರ್ಜಿ ಸಲ್ಲಿಸುವಂತೆ ಸಾರಿಗೆ ಇಲಾಖೆ ತಿಳಿತ್ತು.

ವಿತಾವಿಯಿಂದ ಬೆಳಗಾವಿ ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Related Articles

Back to top button