ಗೋಕಾಕ್ ಮೋದಿ ಮಗನಿಗೆ ಎಂಪಿ ಟಿಕೇಟ್..?
ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿದ್ದು , ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂದು ಹಲವರು ಹಲವಾರು ರೀತಿಯಲ್ಲಿ ಸರ್ಕಸ್ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಸದ್ದಿಲ್ಲದೇ ಕೆಲವರು ಎಂಪಿ ಟಿಕೆಟ್ ರೇಸ್ ನಲ್ಲಿ ಸೇರಿಕೊಂಡಿದ್ದಾರೆ. ಹಾಗಾದರೆ ಅವರು ಯಾರು? ಎಂಬುದನ್ನು ನೋಡೋಣ ಬನ್ನಿ.ಬೆಳಗಾವಿ ಉಪ ಉಪಚುನಾವಣೆ ಏಪ್ರಿಲ್ 17 ರಂದು ನಡೆಯಲಿದೆ ಹಾಗಾಗಿ ಟಿಕೆಟ್ ಆಕಾಂಕ್ಷಿಗಳ ಟಿಕೆಟ್ ಬುಲಾವ್ ಜೋರಾಗಿಯೇ ನಡೆಯುತ್ತಿದೆ.ಹೌದು ಇವರೇ ನಿಖಿಲ್ ಒಸ್ವಾಲ್…. ನಿಖಿಲ್ ಒಸ್ವಾಲ್ ಅವರು ತಮ್ಮ ತಾತನ ಕಾಲದಿಂದಲೂ ಬಿಜೆಪಿ, ಆರ್ ಎಸ್ಎಸ್ ನಲ್ಲಿ ಗುರುತಿಸಿಕೊಂಡಿದ್ದು ಜನಸಾಮಾನ್ಯರ ಜೊತೆಗೆ ಬೆರೆಯುತ್ತಾ ಜನಸೇವೆ ಮಾಡುತ್ತ ಬಂದಿರುವವರು. ತಮ್ಮ ತಂದೆಯವರು ಗೋಕಾಕ ಪಟ್ಟಣದಲ್ಲಿ ಗೋಕಾಕ್ ಮೋದಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಸ್ಥಳೀಯರೇ ನೀವು ಲೋಕಸಭೆಗೆ ಸ್ಪರ್ದಿಸಿ ಎಂದು ಸೂಚಿಸುತ್ತಿದ್ದಾರೆ ಹಾಗಾಗಿ ಈ ಬಾರಿ ಬೆಳಗಾವಿ ಲೋಕಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ವರಿಷ್ಟರು ತಮಗೆ ಟೆಕೆಟ್ ನೀಡಿದ್ದೆ ಆದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ನಿಖಿಲ್ ಒಸ್ವಾಲ್ ಇದ್ದಾರೆ.ಗೋಕಾಕ ಪಟ್ಟಣದಲ್ಲಿ ಗೋಕಾಕ ಮೋದಿ ಎಂದೇ ಚಿರಪರಿಚಿತರಾಗಿದ್ದವರು ಇವರ ತಂದೆ ಅಶೋಕ್ ಒಸ್ವಾಲ್. ಗೋಕಾಕ್ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದೆ ಸುರೇಶ ಅಂಗಡಿ ಅವರಿಗೆ ಎಂಪಿ ಟಿಕೆಟ್ ಕೊಡಿಸುವ ಸಮಯದಲ್ಲಿ ಅಶೋಕ್ ಒಸ್ವಾಲ್ ಅವರ ಪಾತ್ರವೂ ಪ್ರಮುಖವಾಗಿತ್ತು. ಇವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗಿದ್ದುಕೊಂಡು ಜನಸೇವೆಯನ್ನೇ ಕಾಯಕವಾಗಿಸಿಕೊಂಡು ಬಂದ್ದವರು. ಈಗ ನಿಖಿಲ್ ಒಸ್ವಾಲ್ ಅವರು ಅದೇ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಸದಾ ಲವಲವಿಕೆಯಿಂದ ಜನಸಾಮಾನ್ಯರೊಂದಿಗೆ ಬೆರೆಯುತ್ತಾ ಯುವ ಮನಸ್ಸು ಮತ್ತು ಯುವಕರಾಗಿದ್ದಾರೆ, ನಿಖಿಲ್ ಅವರಿಗೆ ಎಂಪಿ ಟಿಕೆಟ್ ನೀಡಬೇಕು. ಇವರ ಕುಟುಂಬದೊಂದಿಗೆ ವಾಜಪೇಯಿಯವರ ಸಂಪರ್ಕ ಇದ್ದಿದ್ದನ್ನು ನಾವು ಮರೆಯಬಾರದು.ಹೌದು ಇನ್ನೇನು ಸದ್ಯದಲ್ಲೇ ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯಲಿದ್ದು ಯಾರಾಗಲಿದ್ದಾರೆ ಎಂಪಿ ಅಭ್ಯರ್ಥಿ? ಬಿಜೆಪಿ ವರಿಷ್ಟರು ಯಾರಿಗೆ ಮಣೆ ಹಾಕಲಿದ್ದಾರೆ?, ಸುರೇಶ ಅಂಗಡಿ ಅವರ ಕುಟುಂಬದ ಕೈ ತಪ್ಪಲಿದೆಯಾ ಟೆಕೆಟ್? ಆಥವಾ ನಿಖಿಲ್ ಓಸ್ವಾಲ ಅವರಿಗೆ ಟಿಕೇಟ್ ಸಿಗುತ್ತಾ ಎಂಬುದನ್ನ ಕಾದುನೋಡಬೇಕು (Advertisement).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ