Belagavi NewsBelgaum NewsKannada NewsKarnataka NewsNationalPolitics

*ಬಿಮ್ಸ್‌ ನಲ್ಲಿ ಹೊಸ ಪ್ಯಾರಾ ಮೆಡಿಕಲ್ ಕೋರ್ಸ್ ಆರಂಭ: ಪ್ರವೇಶಕ್ಕೆ ಅವಕಾಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಗತಿವಾಹಿನಿ ಸುದ್ದಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್)ನಲ್ಲಿ ಪ್ರಸಕ್ತ 2024-25 ರ ಸಾಲಿನಲ್ಲಿ ಹೊಸದಾಗಿ ಪ್ಯಾರಾ ಮೆಡಿಕಲ್ ಕೋರ್ಸುಗಳಾದ ಡಯಾಲಿಸಿಸ್ ಇನ್ ಟೆಕ್ನಾಲಜಿ ಮತ್ತು ಆಪರೇಷನ್ ಥೇಟರ್ ಹಾಗೂ ಅನಸ್ಥೇಶಿಯಾ ಟೆಕ್ನಾಲಜಿಯನ್ನು ಪ್ರಾರಂಭಿಸಲಾಗುತ್ತಿದೆ.

ಈಗಾಗಲೇ ಪ್ಯಾರಾ ಮೆಡಿಕಲ್ ಬೋರ್ಡ್‌ನಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ S.S.L.C/P.U.C (ವಿಜ್ಞಾನ ವಿಭಾಗದ) ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಬಿಮ್ಸ್‌ನ ಹೊಸ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಮ್ಸ್ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button