Kannada NewsLatest

ಎನ್ ಪಿ ಎಸ್ ರದ್ದು ಮಾಡುವಂತೆ ಆಗ್ರಹಿಸಿ ನ.6ಕ್ಕೆ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯ ಸರಕಾರಿ ಎನ್ ಪಿಎಸ್ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ನ.6 ರಂದು ಹಳೆ ಪಿಂಚಣಿ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘದ ಅಧ್ಯಕ್ಷ ಎನ್.ಟಿ.ಲೋಕೇಶ ಹೇಳಿದರು.

ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಿಲ್ಲಾ ಕೋಟೆಯಿಂದ ಪ್ರಾರಂಭವಾಗಲಿರುವ ಸಂಕಲ್ಪ ಯಾತ್ರೆ ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಚೆನ್ನಮ್ಮ‌ ವೃತ್ತದ ಮೂಲಕ ಸರದಾರ್ಸ ಮೈದಾನದಲ್ಲಿ ಕೊನೆಯಾಗಲಿದೆ. ಈ ಯಾತ್ರೆಯಲ್ಲಿ ಸುಮಾರು ಆರು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಹಳೆ ಪಿಂಚಣಿ ಯೋಜನೆ ಒಪಿಎಸ್ ಜಾರಿಗೆ ಮತ್ತು ನೂತನ ಪಿಂಚಣಿ ಎನ್ ಪಿ ಎಸ್ ರದ್ದುಗೊಳಿಸುವಂತೆ ಆಗ್ರಹಿಸಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಸರಕಾರ ಮಾತ್ರ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ನ.6 ರಂದು ಒಪಿಎಸ್ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ನೌಕರರಲ್ಲಿ ಜಾಗೃತಿ ಮೂಡಿಸಲು ಮತ್ತು ಹೋರಾಟಕ್ಕೆ ನೌಕರರನ್ನು ಸಂಘಟಿಸಲು ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ಒಪಿಎಸ್ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

Home add -Advt

ನಮ್ಮ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಾಂತಾರಾಮ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಎನ್ ಪಿಎಸ್ ನಿಂದ ನೌಕರರ ಸಂಧ್ಯಾಕಾಲ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಿವೃತ್ತಿ ನಂತರ ನೌಕರರು ಬದುಕು ಸಂತೋಷದಿಂದ ಇರಬೇಕೆಂದರೆ ಎನ್ ಪಿ ಎಸ್ ನಿರ್ಮೂಲನೆಯಾಗಬೇಕು. ಒಪಿಎಸ್ ಸೌಲಭ್ಯ ಪಡೆಯಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ 39 ಇಲಾಖೆಗಳ 2.5ಲಕ್ಷ ನೌಕರರು ನೂತನ ಪಿಂಚಣಿ ಯೋಜನೆಗೆ ಒಳಪಡುವವರು ಜಿಲ್ಲೆಯಲ್ಲಿ 15 ಸಾವಿರ ನೌಕರರು ಎನ್ ಪಿಎಸ್ ಗೆ ಒಳಪಡಲಿದ್ದಾರೆ‌. ಈಗಾಗಲೇ ಪಂಜಾಬ್, ಛತ್ತಿಸಗಡ್, ಜಾರ್ಖಂಡ್ ಮತ್ತು ರಾಜಸ್ತಾನಗಳಲ್ಲಿ ಎನ್ ಪಿಎಸ್ ರದ್ದುಗೊಳಿಸಲಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಡಾ. ನಾಗಲಕರ, ಸತೀಶ ಬುರುಡ್, ದೀಪಕ, ಮಾರುತಿ, ಎಸ್.ಎಂ.ಪಾಟೀಲ, ಉಮೇಶ ಟೊಪ್ಪದ, ಶ್ಯಾಮ ಮಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PSI ನೇಮಕಾತಿ ಹಗರಣ: ಮೊದಲ ರ್ಯಾಂಕಿಂಗ್ ಅಭ್ಯರ್ಥಿ ಬಂಧನ

https://pragati.taskdun.com/latest/psi-scamfirst-rank-candidatesupriyaarrested/

Related Articles

Back to top button