Kannada NewsKarnataka NewsLatest
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿನೂತನ ದಾಖಲೆ ನಿರ್ಮಾಣ – ಚನ್ನರಾಜ ಹಟ್ಟಿಹೊಳಿ

41 ಲಕ್ಷ ರೂ. ವೆಚ್ಚದಲ್ಲಿ ಸಾಂಬ್ರಾದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಪೂಜೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಳೆದ 4 ವರ್ಷದಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಮುಂದಿನ ಒಂದು ತಿಂಗಳಲ್ಲಿ ನಡೆಯಲಿರುವ ಕಾಮಗಾರಿಗಳು ಬೆಳಗಾವಿ ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲೇ ವಿನೂತನ ದಾಖಲೆ ಬರೆಯಲಿವೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಸಾಂಬ್ರಾ ಗ್ರಾಮದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅನುದಾನದಲ್ಲಿ 41 ಲಕ್ಷ ರೂ,ಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಹಿಂದಿನಿಂದಲೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತ ಬಂದಿದ್ದರೆ ಕ್ಷೇತ್ರ ಇಷ್ಟೊಂದು ಹಿಂದುಳಿಯುತ್ತಿರಲಿಲ್ಲ. ಈವರೆಗೆ ಕ್ಷೇತ್ರ ಸರಿಯಾದ ಅಭಿವೃದ್ಧಿಯನ್ನೇ ಕಂಡಿಲ್ಲ. ಬಹುತೇಕರು ಹೆಸರಿಗಷ್ಟೆ ಜನಪ್ರತಿನಿಧಿಗಳಾದರೇ ವಿನಃ ಜನರ ಕಷ್ಟಸುಖಕ್ಕಾಗಲಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಲಿಲ್ಲ. ಹಾಗಾಗಿ ಈಗ ಮಾಡಲು ಸಾಕಷ್ಟು ಕೆಲಸಗಳಿವೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಯಾವ್ಯಾವ ಇಲಾಖೆಯಿಂದ ಯೋಜನೆ ತರಲು ಸಾಧ್ಯವೋ ಒಂದನ್ನೂ ಬಿಟ್ಟಿಲ್ಲ. ಹೋರಾಟ ಮಾಡಿ ಯೋಜನೆಗಳನ್ನು ತಂದು ಕೆಲಸ ಮಾಡಿಸುತ್ತಿದ್ದಾರೆ. ಇದು ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಆಗಿರಲಿಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಾಗೇಶ ದೇಸಾಯಿ, ಮಹೇಶ ಕುಲಕರ್ಣಿ, ಲಕ್ಷ್ಮಣ ಕೊಳೆಪ್ಪಗೋಳ, ಸದು ಪಾಟೀಲ, ರಫೀಕ್ ಅತ್ತಾರ, ಗುರು ಹಿರೇಮಠ, ಮಾರುತಿ ಜೋಗಾಣಿ, ಸಂಜು ಕಾಂಬಳೆ, ಶಿವು, ಲಕ್ಷ್ಮಣ ಸುಳೇಭಾವಿ, ಪ್ರಕಾಶ ಚೌಗುಲೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.