ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಐತಿಹಾಸಿಕ ಚನ್ನಮ್ಮನ ಕಿತ್ತೂರಿಗೆ ನೂತನವಾಗಿ ತಾಲೂಕು ಪಂಚಾಯತ ಕಚೇರಿಯು ಸ್ಥಳೀಯ ಬೀಡಿ ಕ್ರಾಸ್ ಪ್ರವಾಸಿ ಮಂದಿರದಲ್ಲಿ ದಿ.೨೩ರಂದು ಉದ್ಘಾಟನೆಗೊಳ್ಳಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾವಿ ಹೇಳಿದರು.
ಶಾಸಕ ಮಹಾಂತೇಶ ದೊಡಗೌಡರ ನೇತೃತ್ವದಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಬೆಳಿಗ್ಗೆ ೧೧ ಕ್ಕೆ ತಾಪಂ ಕಚೇರಿ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ, ಅಂಬಡಗಟ್ಟಿ, ನಿಚ್ಚಣಕಿ, ಹುಣಶೀಕಟ್ಟಿ, ಕಾದ್ರೋಳ್ಳಿ, ಉಗರಕೋಡ, ದೇಗಾಂವ, ತೇಗೂರ ಖೋದಾನಪೂರ ತಾಪಂ ಸದಸ್ಯರು ಈ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಹೇಳಿದರು.
ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಇದೇ ಸ್ಥಳದಲ್ಲಿ ತಾಪಂ ಕಾರ್ಯ ನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಮಿನಿ ವಿಧಾನ ಸೌಧದ ಹತ್ತಿರ ತಾಪಂ ಕಚೇರಿಯೂ ಸ್ಥಳಾಂತರಗೊಳ್ಳಲಿದೆ. ತಾಪಂ ಕಟ್ಟಡಕ್ಕಾಗಿ ೩೩ ಗುಂಟೆ ಜಾಗೆಯನ್ನು ನೀಡುವಂತೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ