ಲಂಡನ್ –
ಕೋವಿಡ್ ೧೯ನ ರೂಪಾಂತರಿಯಾದ ಓಮಿಕ್ರಾನ್ ಮತ್ತೊಂದು ವೇಷ ಧರಿಸಿ ದಾಳಿಯಿಟ್ಟಿದೆ. ಓಮಿಕ್ರಾನ್‌ನ ಈ ಹೊಸ ರೂಪಾಂತರಿ ವೈರಸ್ ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ಶನಿವಾರ ಖಚಿತಪಡಿಸಿದೆ.
ಇಂಗ್ಲೆಂಡ್ ಆರೋಗ್ಯ ಸುರಕ್ಷತಾ ಸಂಸ್ಥೆ ಓಮಿಕ್ರಾನ್ ವೇರಿಯೆಂಟ್‌ಗಳ ಅಧ್ಯಯನ ಮಾಡುತ್ತಿರುವಾಗ ಹೊಸ ರೂಪಾಂತರಿ ಎಕ್ಸ್‌ಇ ಪತ್ತೆಯಾಗಿದೆ. ಇದು ಓಮಿಕ್ರಾನ್‌ನ ಈ ಮೊದಲಿನ ರೂಪಾಂತರಿಯಾದ ಬಿಎ ೧ ಮತ್ತು ಬಿಎ ೨ನ ಜೋಡಣೆಯಿಂದ ಹೊರಬಂದ ಮ್ಯುಟೇಶನ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಎಕ್ಸ್‌ಇ ವೇರಿಯೆಂಟ್ ಈ ಮೊದಲಿನ ಎಲ್ಲ ಕೋವಿಡ್ ೧೯ ರೂಪಾಂತರ ವೈರಸ್‌ಗಳಿಗಿಂತ ಅತ್ಯಂತ ವೇಗದಲ್ಲಿ ಪ್ರಸರಣಗೊಳ್ಳುವ ಸಾಮರ್ಥ್ಯ ಹೊಂದಿದ್ದು ಹೆಚ್ಚು ಅಪಾಯಕಾರಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ನಟಿ ಮಲೈಕಾ ಅರೋರಾಗೆ ಅಪಘಾತ: ಆಸ್ಪತ್ರೆಗೆ ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ