
ಪ್ರಗತಿವಾಹಿನಿ ಸುದ್ದಿ: ಫ್ರಾನ್ಸ್‌ನಲ್ಲಿ ಹೊಸ ವರ್ಷದ ವೇಳೆ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ವ್ಯಾಪಕ ವರದಿಯಾಗಿವೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿದ್ದು, ನೂರಾರು ಜನರನ್ನು ಬಂಧಿಸಲಾಗಿದೆ.
ಫ್ರಾನ್ಸ್‌ನ ಆಂತರಿಕ ವ್ಯವಹಾರಗಳ ಸಚಿವಾಲಯದ ಹೇಳಿಕೆಯ ಪ್ರಕಾರ, ಈ ಕೃತ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 505 ಜನರನ್ನು ಬಂಧಿಸಲಾಗಿದ್ದು, 403 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಳೆದ ವರ್ಷ 984 ವಾಹನಗಳಿಗೆ ಹೋಲಿಸಿದರೆ, ಈ ಬಾರಿ ಒಟ್ಟು 1,173 ವಾಹನಗಳು ಸುಟ್ಟುಹೋಗಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುವ್ಯವಸ್ಥೆ ಕಾಪಾಡಲು 90,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದರೂ, ಈ ಘಟನೆಗಳು ನಡೆದಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.




