
ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಸಿಸೇರಿಯನ್ ಮಾಡಿ ಮಗು ತೆಗೆಯುವಾಗ ಮಗುವಿನ ಕೆನ್ನೆಯನ್ನೂ ಕಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಮೆರಿಕಾದಲ್ಲಿ ಈ ಘಟನೆ ನಡೆದಿದ್ದು, ವಿಲಿಯಮ್ಸ್ ಎಂಬುವವರ ಪತ್ನಿಯ ಸಿಸೇರಿಯನ್ ವೇಳೆ ವೈದ್ಯರ ಎಡವಟ್ಟಿನಿಂದಾಗಿ ಈ ಘಟನೆ ಸಂಭವಿಸಿದೆ. ಹೊಟ್ಟೆಯನ್ನು ಕತ್ತಿರುವ ಜಾಗದಲ್ಲಿ ಒಳಗಡೆ ಸರಿಯಾಗಿ ಮಗುವಿನ ಮುಖ ಇದ್ದುದರಿಂದ ಈ ಅನಾಹುತವಾಗಿದೆ. ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದ್ದು, ಗಾಯಗೊಂಡ ಮಗುವಿನ ಕೆನ್ನೆಗೆ ಬರೋಬ್ಬರಿ 13 ಹೊಲಿಗೆ ಹಾಕಲಾಗಿದೆ.
ಪ್ಲಾಸ್ಟಿಕ್ ಸರ್ಜರಿ ಮೂಲಕ ಎಲ್ಲವನ್ನೂ ಸರಿಪಡಿಸುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಹುಟ್ಟಿದ ಶಿಶು ನೋವನುಭವಿಸುವಂತಾಗಿದೆ ಎಂದು ಮಗುವಿನ ತಂದೆ ವೀಲಿಮ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಎಂ ಸ್ಥಾನಕ್ಕೆ ಸಿದ್ದು-ಡಿಕೆಶಿ ಜಗಳ; ಪರಮೇಶ್ವರ್ ಇಣುಕು ನೋಟ: ಕಾರಜೋಳ ವ್ಯಂಗ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ