
ಪ್ರಗತಿವಾಹಿನಿ ಸುದ್ದಿ: ಹೆತ್ತ ಕಂದಮ್ಮನನ್ನು ಕಸದ ರಾಶಿಗೆ ಬಿಸಾಕಿ ಹೋಗಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಕಸದ ರಾಶಿಯಲ್ಲಿ ಅಳುತ್ತಿದ್ದ ನವಜಾತ ಗಂಡುಮಗುವನ್ನು ಕಂಡಿದ್ದಾರೆ. ಕೂಡಲೇ ಶಿವನ್ನು ರಕ್ಷಿಸಿದ್ದಾರೆ.
ನವಜಾತ ಗಂಡುಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ನವಜಾತ ಶಿಶುವಿನ ಜೀವ ಉಳಿದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಂದಮ್ಮನ ಪೋಷಕರ ಪತ್ತೆಗಾಗಿ ಯತ್ನಿಸಿದ್ದಾರೆ.