ಪ್ರಗತಿವಾಹಿನಿ ಸುದ್ದಿ; ಲಖನೌ: ನವದಂಪತಿ ಮದುವೆಯ ಮೊದಲ ರಾತ್ರಿಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೆಶದ ಬಹ್ರೈಚ್ ನಲ್ಲಿ ನಡೆದಿದೆ.
22 ವರ್ಷದ ಪ್ರತಾಪ್ ಯಾದವ್, 20 ವರ್ಷದ ಪುಷ್ಪಾ ಮೃತರು. ಮದುವೆಯಾದ ರಾತ್ರಿಯೇ ನವದಂಪತಿಗಳು ಹೃದಯಾಘಾತದಿಮ್ದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೇ 30ರಂದು ಪ್ರತಾಪ್ ಯಾದವ್ ಹಾಗೂ ಪುಷ್ಪಾ ವಿವಾಹವಾಗಿ ಮೊದಲ ರಾತ್ರಿ ತಮ್ಮ ಕೋಣೆಗೆ ಹೋಗಿದ್ದ ನವದಂಪತಿ, ಮರುದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
https://pragati.taskdun.com/bailahongalabrother-murderland-isuebelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ