Latest

8.1 ತಿವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ನ್ಯೂ ಕ್ಯಾಲೆಡೋನಿಯಾ: ನ್ಯೂಜಿಲೆಂಡ್ ಕರಾವಳಿಯಲ್ಲಿ ಇಂದು ಮತ್ತೆ 8.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕೆರ್ಮಾಡೆಕ್ ದ್ವೀಪದ ಬಳಿ 8.1 ತೀವ್ರತೆಯ ಭೂಕಂಪ ಉಂಟಾಗಿದೆ.

ನ್ಯೂಜಿಲ್ಯಾಂಡ್, ನ್ಯೂ ಕ್ಯಾಲೆಡೋನಿಯಾ ಮತ್ತು ವ್ಯಾನ್ ವಾಟು ಕರಾವಳಿ ನಿವಾಸಿಗಳಿಗೆ ಸುನಾಮಿ ಆತಂಕ ಎದುರಾಗಿದೆ. 10 ಅಡಿ ಎತ್ತರದ ಅಲೆಗಳು ಫ್ರೆಂಚ್ ಭೂಪ್ರದೇಶದತ್ತ ಬರುತ್ತಿದೆ. ಹೀಗಾಗಿ ಕಡಲ ತೀರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸರ್ಕಾರ ಸೂಚಿಸಿದೆ.

ಸುನಾಮಿ ಎಚ್ಚರಿಕೆ ಬೆನ್ನಲ್ಲೇ ಸಮುದ್ರ ತೀರದ ಜನರು ತಂಡೋಪತಂಡವಾಗಿ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button