Karnataka NewsPolitics

*ವ್ಯಕ್ತಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದೆ ಅವಮಾನ*

ಪ್ರಗತಿವಾಹಿನಿ ಸುದ್ದಿ: 69ನೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಹಲವು ಸಾಧಕರಿಗೆ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆದರೆ. ಬಾಬು ಪಿಲಾ‌ರ್ ಎಂಬ ಸಮಾಜ ಸೇವಕನನ್ನು ಅವಮಾನಿಸಲಾಗಿದೆ.‌

ಸ್ಪೀಕರ್ ಯುಟಿ ಖಾದರ್ ಅವರು ಪ್ರತಿನಿಧಿಸುವ ಉಳ್ಳಾಲ ಕ್ಷೇತ್ರದ ಬಾಬು ಪಿಲಾ‌ರ್ ಎಂಬ ಸಮಾಜ ಸೇವಕನನ್ನು ಸುವರ್ಣ ಮಹೋತ್ಸವ ಪ್ರಶಸ್ತಿ ನೀಡುವುದಾಗಿ ಕರೆಸಿ ಪ್ರಶಸ್ತಿ ನೀಡದೇ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಅಲ್ಪಸಂಖ್ಯಾತರ ಪಾರ್ಥಿವ ಶರೀರಗಳಿಗೆ ಬಾಬು ಪಿಲಾರ್ ಅಂತ್ಯಕ್ರಿಯೆ ನೆರವೇರಿಸುತ್ತಾ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಅವರ ಸೇವೆ ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಶಸ್ತಿ ಪ್ರಕಟಿಸಿದ್ದು, ಇದೀಗ ತನ್ನ ಸಣ್ಣ ಎಡವಟ್ಟಿನಿಂದ ಪ್ರಶಸ್ತಿ ಪ್ರಧಾನ ಮಾಡದೆ ಅವಮಾನ ಮಾಡಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಕರೆಸಿಕೊಂಡು ಕೊನೇ ಕ್ಷಣದಲ್ಲಿ ಪ್ರಶಸ್ತಿ ನೀಡದೇ ಕೈಬಿಟ್ಟು ಅವಮಾನ ಮಾಡಿರುವ ಆರೋಪ ಕೇಳಿಬಂದಿದ್ದು ಪಿಲಾ‌ರ್ ಅವರು ಸಾಯಂಕಾಲ ಕುಮಾರಕೃಪ ಬಳಿ ಬಸ್ ಹತ್ತುವಾಗ ಇಲಾಖೆಯ ಅಧಿಕಾರಿಗಳು ಫೋನ್ ಮಾಡಿದ್ದಾರೆ. ನಿಮಗಲ್ಲ ಬಾಬು ಕಿಲಾರ್‌ಗೆ ಪ್ರಶಸ್ತಿ ಬಂದಿರುವುದಾಗಿ ತಿಳಿಸಿದ್ದರಂತೆ. ಕಣ್ತಪ್ಪಿನಿಂದ ಹೀಗಾಗಿದೆ, ಕ್ಷಮಿಸಿ ಅಂತಲೂ ನಂತರ ಅಧಿಕಾರಿಗಳು ಬಾಬು ಪಿಲಾರ್ ಬಳಿ ಕೇಳಿ ಪ್ರಶಸ್ತಿ ನೀಡದೇ ಅವಮಾನ ಮಾಡಿ ಕಳುಹಿಸಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬಂದಿವೆ.

Home add -Advt

Related Articles

Back to top button