Politics

*ಮಾಜಿ ಸಚಿವ ಬೇಗಾನೆ ರಾಮಯ್ಯ ವಿಧಿವಶ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಚಿವ ಬೇಗಾನೆ ರಾಮಯ್ಯ ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

Home add -Advt

ಮಾಜಿ ಸಚಿವ ಬೇಗಾನೆ ರಾಮಯ್ಯ ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರ ತಂದೆ ಬೇಗಾನೆ ರಾಮಯ್ಯ.

ಇಂದು ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯ ಸೀತಾಫಾರಂ ನಲ್ಲಿ ಬೇಗಾನೆ ರಾಮಯ್ಯ ಅವರ ಅಂತ್ಯಕ್ರಿಯೆ ನಡೆಯಲಿದೆ. ಮಾಜಿ ಸಿಎಂ ಗುಂಡೂರಾವ್ ಅವರ ಮಾರ್ಗದರ್ಶನ ಇವರನ್ನು ಪಕ್ವವನ್ನಾಗಿಸುತ್ತದೆ. ಪಕ್ಷ ಸಂಘಟನೆ, ಜನಪರ ಕಾಳಜಿ, ಕ್ರಿಯಾಶೀಲ ಮನೋಭಾವದಿಮ್ದಾಗಿ ರಾಜಕೀತ್ಯದಲ್ಲಿ ರಾಮಯ್ಯ ಬೇಗನೇ ಛಾಪು ಮೂಡಿಸಿದ್ದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

250 ಮನೆಗಳಿರುವ ಗ್ರಾಮಕ್ಕೆ ಮಾತ್ರ ಬೋರ್ ವೆಲ್ ಕೊರೆಸುವ ಅನುಮತಿ ನೀಡಿದ್ದ ಸರ್ಕಾರದ ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಮಲೆನಾಅಡಿನ ಭಾಗದಲ್ಲಿ ನೀರಿನ ಅಭಾವಕ್ಕೆ ಕೊನೆ ಹಾಡಿದವರು ಬೇಗಾನೆ ರಾಮಯ್ಯ. ಈ ಹಿನ್ನೆಲೆಯಲ್ಲಿ ಬೇಗಾನೆ ರಾಮಯ್ಯ ಅವರನ್ನು ಮಲೆನಾಡಿನ ಭಗೀರಥ, ಬೋರ್ ವೆಲ್ ರಾಮಯ್ಯ ಎಂದೇ ಜನರು ಕರೆಯುತ್ತಿದ್ದರು.

Related Articles

Back to top button