ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ಇದು ಹಿಂದೆಂದಿಗಿಂತ ಕಠಿಣವಾಗಿರಲಿದೆ ಎನ್ನುವ ಸೂಚನೆಯನ್ನು ಸರಕಾರ ನೀಡಿದೆ.
ರಾತ್ರಿ 10 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಮುಂದಿನ 10 ದಿನಗಳ ಕಾಲ ಕರ್ಫ್ಯೂ ವಿಧಿಸಲಾಗಿದೆ.
10 ಗಂಟೆಯ ನಂತರ ಹೊಟೆಲ್, ಬಾರ್ ಸೇರಿದಂತೆ ಎಲ್ಲವೂ ಬಂದ್ ಆಗಲಿದೆ. ಹೊರ ಊರಿಗೆ ಪ್ರಯಾಣಿಸುವವರು ಟಿಕೆಟ್ ತೋರಿಸಿ ಸಂಚರಿಸಬಹುದು. ಆಸ್ಪತ್ರೆಗಳಿಗೆ ತೆರಳುವವರಿಗೆ ಅವಕಾಶವಿದೆ. 10 ಗಂಟೆಯ ನಂತರ ಹೊಟೆಲ್ ನಲ್ಲಿ ಪಾರ್ಸೆಲ್ ಮಾತ್ರ ಅವಕಾಶವಿದೆ.
ಕರ್ಫ್ಯೂವನ್ನು 11 ಗಂಟೆಯವರೆಗೆ ಸಡಿಲಿಸುವಂತೆ ಹೊಟೆಲ್ ಮಾಲಿಕರು ಮನವಿ ಮಾಡಿದ್ದಾರೆ. 11 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಹೊಟೆಲ್ ತೆರೆಯಲು ಅವಕಾಶ ಕೊಡಿ ಎನ್ನುತ್ತಿದ್ದಾರೆ.
ರಾಜ್ಯದಲ್ಲಿ ಕೊರೋನಾ ಮತ್ತು ಒಮಿಕ್ರಾನ್ ನಿಧಾನವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಹೊಸವರ್ಷಾಚರಣೆ ಗದ್ದಲ ತಡೆಯಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ