ನಿಖಿಲ್ ಕುಮಾರಸ್ವಾಮಿ ಮದುವೆ ನಿಶ್ಚಯ

ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ, ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿಯವರ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಕಾಂಗ್ರೆಸ್ ಶಾಸಕರೊಬ್ಬರ ಅಣ್ಣನ ಮೊಮ್ಮಗಳನ್ನು ನಿಖಿಲ್ ವರಿಸಲಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಿಖಿಲ್, ಶೀಘ್ರದಲ್ಲೇ ತಮ್ಮ ಮದುವೆ ಬಗ್ಗೆ ಅನೌನ್ಸ್ ಮಾಡುವುದಾಗಿ ಹೇಳಿದ್ದರು. ಇದೀಗ ಮದುವೆ ದಿನಾಂಕ ನಿಗದಿಯಾಗಿದೆ. ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ಹುಡುಗಿ ರೇವತಿ ಎಂಸಿಎ ಪದವೀಧರೆಯಾಗಿದ್ದಾರೆ.

ಇಂದು ಬೆಂಗಳೂರಿನ ಮಲ್ಲತಳ್ಳಿಯಲ್ಲಿರುವ ವಧುವಿನ ಮನೆಗೆ ಹೆಚ್ ಡಿ ದೇವೇಗೌಡರ ಕುಟುಂಬದವರು ಭೇಟಿ ನೀಡಿ ವಧು ನೋಡುವ ಶಾಸ್ತ್ರ ಮುಗಿಸಿದ್ದು, ಮೇ 17 ಮತ್ತು 18 ರಂದು ಮದುವೆ ದಿನಾಂಕ ನಿಗದಿ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ದೇವೇಗೌಡರು, ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿಯರು ಉಪಾಸ್ಥಿತರಿದ್ದು, ಮದುವೆ ಮಾತುಕತೆ ನಡೆಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button