ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಯ ಮಗನ ನಾಮಕರಣ ಮಾಡಲಾಗಿದ್ದು, ಅವ್ಯಾನ್ ಎಂದು ಹೆಸರಿಡಲಾಗಿದೆ.
ಜೂನ್ 8 ರಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಕಾರ್ಯಕ್ರಮ ನೆರವೇರಿತು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಬಹುತೇಕರು ಭಾಗಿಯಾಗಿದ್ದರು.
ದೇವೇಗೌಡರ ಮರಿ ಮೊಮ್ಮಗನಿಗೆ ಅವ್ಯಾನ್ ಎಂದು ನಾಮಕರಣ ಮಾಡಲಾಗಿದ್ದು, ಅವ್ಯಾನ್ ಎಂದರೆ ಅರ್ಥವೇನು ಎಂದು ನಿಖಿಲ್ ಅಭಿಮಾನಿಗಳು ಹುಡುಕಾಡಿದ್ದಾರೆ. ಅವ್ಯಾನ್ ಎಂದರೆ ಪಂಡಿತರ ಪ್ರಕಾರ ದೇವರ ಹೆಸರು. ದೇವರನ್ನು ಕರೆಯುವ ಇನ್ನೊಂದು ಪದವೇ ಅವ್ಯಾನ್. ಅಂದರೆ ನಾಶವಾಗದೇ ಇರುವವನು. ಒಟ್ಟಾರೆ ಮಗನಿಗೆ ವಿಭಿನ್ನ ಹಾಗೂ ಅರ್ಥಗರ್ಭಿತವಾದ ಹೆಸರನ್ನು ಇಟ್ಟಿದ್ದಾರೆ ನಿಖಿಲ್ ಕುಮಾರಸ್ವಾಮಿ.
ಗೋಕಾಕ್: ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ