*ಧರ್ಮಸ್ಥಳ ಚಲೋ ಕೈಗೊಂಡ ನಿಖಿಲ್: ಪ್ರಜ್ವಲ್ ನಿಂದ ನೊಂದವರ ಪರ ಯಾತ್ರೆ ಯಾವಾಗ ಎಂದ ಜನ…?*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂಯದ್ರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಯಾತ್ರೆ ನಡೆಯಲಿದೆ. ಇದರ ಜೊತೆಗೆ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ. ಆದರೆ, ಜನರು ಮಾತ್ರ ಪ್ರಜ್ವಲ್ ರೇವಣ್ಣನಿಂದ ದೌರ್ಜನ್ಯಕ್ಕೊಳಗಾದ ಹೆಣ್ಮಕ್ಕಳನ್ನು ರಕ್ಷಿಸಿ ಎನ್ನುತ್ತಿದ್ದಾರೆ.
ಪ್ರಜ್ವಲ್ ನಿಂದ ಅನ್ಯಾಯಕ್ಕೆ ಒಳಗಾದ, ನೊಂದ ಮಹಿಳೆಯರ ಪರವಾಗಿ ಯಾತ್ರೆ ಯಾವಾಗ?
ಪ್ರಜ್ವಲ್‌ನಿಂದ ಅನ್ಯಾಯಕ್ಕೆ ಒಳಗಾದ, ನೊಂದ ಮಹಿಳೆಯರ ಪರವಾಗಿ ಯಾತ್ರೆ ಯಾವಾಗ? ಮನೆಯಲ್ಲಿಯೇ ಭಕ್ಷಕರು ಇರುವಾಗ ನಾಡು ರಕ್ಷಣೆ ಸಾಧ್ಯವೇ ಎಂದು ಪವಿತ್ರಾ ಗೌಡ ಎನ್ನುವವರು ಪ್ರಶ್ನಿಸಿದ್ದಾರೆ.
ಹಿಂದೂ ಮಹಿಳೆಯರ ಅತ್ಯಾಚಾರ ಮಾಡಿ ಜೈಲಿಗೆ ಹೋಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಕುಟುಂಬದಿಂದ ಧರ್ಮಸ್ಥಳ ಸತ್ಯ ಯಾತ್ರೆ ಅಂತೆ.
ಹಾಸನ To ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗೋ ಬದಲು, ತಮ್ಮ ಕುಟುಂಬದವರು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಧರ್ಮಸ್ಥಳ To ಹಾಸನಕ್ಕೆ ಪಾದಯಾತ್ರೆ ಮಾಡಬೇಕಿತ್ತು ಎಂದು ಶ್ವೇತಾ ಕಿರಣ್ ಎನ್ನುವವರು ಟ್ವಿಟ್ ಮಾಡಿದ್ದಾರೆ.
ಧರ್ಮಸ್ಥಳ ಕೊಲೆಗಳ ಬಗ್ಗೆ ಮಾತಾಡಿ, ಧರ್ಮ ಉಳಿಸಿ ಎಂದು ಹೇಳುವ ಬದಲು ಪ್ರಜ್ವಲ್ ರೇವಣ್ಣನಿಂದ ಮೋಸ ಹೋದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸೋ ಬಗ್ಗೆ ಮಾತಾಡಿ ಎಂದು ಕೆಲವರು ಟ್ವಿಟ್ ಮಾಡಿದ್ದಾರೆ.
ಮಣಿಪುರ ಘಟನೆಯಾದಾಗ ಎಲ್ಲಿ ಹೋಗಿದ್ರಿ? ಧರ್ಮಸ್ಥಳ ಸೌಜನ್ಯ ಕೇಸ್ ನಿಮ್ಮ ಸರ್ಕಾರ ಇದ್ದಾಗ ಆಗಿತ್ತು? ಪ್ರಜ್ವಲ್ ರೇವಣ್ಣ ಎಂಬ ಪಾಪಿ ಅಪರಾಧಿ ಅಂತಾ ಗೊತ್ತಾದರೂ, ಅಂತಾ ಪಾಪಿಯ ಮನೇಯವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಿದ್ದೀರಿ. ಇದ್ಯಾವ್ ಸೀಮೆ ನ್ಯಾಯ ಎಂದು ಬಿಜೆಪಿಯನ್ನೂ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕುಟುಕಿದ್ದಾರೆ.
ಪಾದಯಾತ್ರೆಯಲ್ಲಿ ನಿಖಿಲ ಹೇಳಿದ್ದೇನು..?
ಪಾದಯಾತ್ರೆ ವೇಳೆ ಮಾತನಾಡಿರುವ ನಿಖಿಲ ಕುಮಾರಸ್ವಾಮಿ, ಇದು ರಾಜಕೀಯ ಕಾರ್ಯಕ್ರಮವಲ್ಲ. ಎಲ್ಲಾ ರಾಜಕೀಯ ಪಕ್ಷಗಳಲ್ಲಿರುವ ಭಕ್ತಾದಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸನಾತನ ಧರ್ಮವನ್ನು ರಕ್ಷಿಸಬೇಕಿದೆ ಎಂದರು.
ಇಂದು ನಾವೆಲ್ಲರೂ ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಹೋಗುತ್ತಿದ್ದೇವೆ. ಧರ್ಮಸ್ಥಳ ಸತ್ಯ ಯಾತ್ರೆ ಎಂದು ಇದಕ್ಕೆ ಹೆಸರಿಸಲಾಗಿದೆ. ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ಲಕ್ಷಾಂತರ ಮಂದಿ ಭಕ್ತಾದಿಗಳು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ನಾನು ಇದು ರಾಜಕೀಯ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿಗೆ ನಡೆದ ಅನುಮಾನಾಸ್ಪದ ಘಟನೆಗಳ ಬಗ್ಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು.