Belagavi NewsBelgaum NewsKannada NewsKarnataka NewsPolitics

*ನಿಪ್ಪಾಣಿ ನಗರಸಭೆ ಬಿಜೆಪಿ ತೆಕ್ಕೆಗೆ*

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಇಡೀ ಜಿಲ್ಲೆಯ ಗಮನ ಸೆಳೆದಿರುವ ನಗರಸಭೆಯಲ್ಲಿ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ನಗರಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.

ಬಿಜೆಪಿ ನಗರಸೇವಕಿ ಸೋನಲ್ ರಾಜೇಶ್ ಕೊಠಿಯಾ ಅಧ್ಯಕ್ಷೆಯಾಗಿ ಮತ್ತು ಸಂತೋಷ ಸಾಂಗಾವಕರ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅವರು 17 ಮತಗಳನ್ನು ಪಡೆದು ರಾಷ್ಟ್ರೀಯವಾದಿ ಶರದ್‍ಚಂದ್ರ ಪವಾರ್ ಗುಂಪಿನ ಅಧ್ಯಕ್ಷೀಯ ಅಭ್ಯರ್ಥಿ ಅನಿತಾ ದಿಲೀಪ್ ಪಠಾಡೆ ಮತ್ತು ಉಪಾದಾಕ್ಷೀಯ ಅಭ್ಯರ್ಥಿ ಸಫ್ರ್ರಾಜ್ ದಾದಾಸಾಹೇಬ್ ಬಡೆಘರ್ ಅವರನ್ನು ಸೋಲಿಸಿದರು. ಇಬ್ಬರು ಕಾಂಗ್ರೆಸ್ ಮತ್ತು ಓರ್ವ ಸ್ವತಂತ್ರ ನಗರಸೇವಕನ ಬೆಂಬಲದೊಂದಿಗೆ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿದೆ. 

ಬಿಜೆಪಿ 3 ಕಾಂಗ್ರೆಸ್ ನಗರಸೇವಕರ ಪೈಕಿ 2 ಮತ್ತು ಒಬ್ಬ ಸ್ವತಂತ್ರ ನಗರಸೇವಕರು ಮತ ಹಾಕಿದ್ದು, ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿದೆ. ಒಬ್ಬ ಕಾರ್ಪರೇಟರ್ ಗೈರಾಗಿದ್ದರು.

ವಿಜಯೋತ್ಸವದ ನಂತರ ಬಿಜೆಪಿ ಕಾರ್ಯಕರ್ತರ ಡಾಲ್ಬಿ ಸದ್ದು ಮಾಡಿತು, ನಗರದಲ್ಲಿ ಪಟಾಕಿ ಸಿಡಿಸಿ, ಗುಲಾಲ್ ಎರಚಿ ಸಂಭ್ರಮಿಸಿದರು. ನಗರದ ಎಲ್ಲ ಮಹಾಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಅವರೊಂದಿಗೆ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಎಮ್.ಪಿ. ಪಾಟೀಲ್, ಉಪಾಧ್ಯಕ್ಷ ಪವನ ಪಾಟೀಲ, ಎಲ್ಲ ನಿರ್ದೇಶಕರು, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ನಗರಸೇವಕ ಜಯವಂತ ಭಾಟಲೆ, ರಾಜೇಂದ್ರ ಗುಂಡೆಶಾ, ನೀತಾ ಬಾಗಡೆ, ವಿಲಾಸ ಗಾಡಿವಡರ, ನಗರಸೇವಕರು ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಪ್ಪಾಣಿ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿದ ನಂತರ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಂಭ್ರಮಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button