Kannada News

ನಿಪ್ಪಾಣಿ ಮತಕ್ಷೇತ್ರದಲ್ಲಿ ಜೊಲ್ಲೆ ಉದ್ಯೋಗ ಸಮೂಹ ವತಿಯಿಂದಆಹಾರ ಕಿಟ್ ವಿತರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಹಾಮಾರಿ ಕರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಲಾಕ್ ಡೌನ್ ನಿಂದ ಸಮಸ್ಯೆ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ದಿನಸಿ ಮತ್ತು ಅಗತ್ಯ ವಸ್ತುಗಳ ಕಿಟ್ ವಿತರಿಸುತ್ತಿರುವದಾಗಿ ಬಸವಪ್ರಸಾದ ಜೊಲ್ಲೆ ತಿಳಿಸಿದರು.

ಒಂದು ಕಿಟ್ನಲ್ಲಿ 1 ಕೆಜಿ ಸಕ್ಕರೆ, 1 ಕೆಜಿ ರವೆ, 1 ಕೆಜಿ ಉಪ್ಪು 1 ಕೆಜಿ, ಮೈದಾ 100 ಗ್ರಾಂ ಚಹಾಪುಡಿ, 1 ಮಸಾಲೆ ಪಾಕೆಟವನ್ನು ಕಿಟ್ ಮಾಡಿ ವಿತರಿಸಿದರು.

ಲಾಕ್ ಡೌನ್ ಆಗಿರುವದರಿಂದ ಕುಟುಂಬಗಳ ನಿರ್ವಹಣೆಯಲ್ಲಿ ಸಾಕಷ್ಟು ತೊಂದರೆಗಳಾಗಿದ್ದು 5000 ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ವಿತರಿಸಿ ಜೊಲ್ಲೆ ಉದ್ಯೋಗ ಸಮೂಹ ಅಳಿಲು ಸೇವೆ ಮಾಡಿರುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ, ಎಂ. ಪಿ. ಪಾಟೀಲ, ಸಮೀತ ಸಾಸನೆ, ಬಂಡಾ ಘೋರಪಡೆ, ಜಯವಂತ ಬಾಟಲೆ, ಜಿಲ್ಲಾ ಪಂಚಾಯತ ಸದಸ್ಯ ಸಿದ್ದು ನರಾಟೆ, ಬಿಜೆಪಿ ನಗರಾದ್ಯಕ್ಷ ರಾದ ಪ್ರಣವ ಮಾನವಿ, ದೀಪಾಲಿ ಗಿರಿ, ಸುಜಾತಾ ಕದಂ, ಪ್ರಭಾವತಿ ಸೂರ್ಯವಂಶಿ, ಸಂತೋಷ ಸಾಂಗವಕರ, ಸಚೀನ ಚಗಲೆ, ಉದಯ ನಾಯಿಕ, ರವಿ ಕದಂ, ಮಹೇಶ ಸೂರ್ಯವಂಶಿ, ವಿಶಾಲ ಇರಿ, ಮನಿಷಾ ರಾಂಗೋಲೆ,ಸಂಜಯ ಜಂಗಿ, ಸೂರಜ ಭವರೆ, ಅನೇಕ ಗಣ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button