ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ನಿಪ್ಪಾಣಿ ಸಮೀಪದ ಪಟ್ಟಣಕುಡಿ ವ್ಯಾಪ್ತಿಯಲ್ಲಿ ರಾಜೀವ ಗಾಂಧಿ ಹೌಸಿಂಗ ಬೋರ್ಡ್‍ನ ವಸತಿ ಯೋಜನೆಯಡಿ 2052 ಮನೆಗಳ ನಿರ್ಮಾಣ ಕಾಮಗಾರಿಯನ್ನು ಸಚಿವೆ ಶಶಿಕಲಾ ಜೊಲ್ಲೆ ವೀಕ್ಷಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ – ನಿಪ್ಪಾಣಿ ‘ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿದ್ದ 2052 ವಸತಿ ಯೋಜನೆಯಲ್ಲಿಯ ಫಲಾನುಭವಿ ಕುಟುಂಬಗಳಲ್ಲಿಯ ಮಹಿಳೆಯರಿಗಾಗಿ ಗಾರ್ಮೆಂಟ್ಸ್, ಮೊದಲಾದ ಸಣ್ಣಪುಟ್ಟ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಗೊಳಿಸುವುದೇ ನನ್ನ ಉದ್ದೇಶವಾಗಿದೆ. ಈ ಮೂಲಕ ಈ ಯೋಜನೆಯಲ್ಲಿಯ ಅವರ ಸಾಲ ಮರಳಿಸಲು ಸುಲಭವಾಗಲಿದೆ’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
‘2013ರಿಂದ 2020ರವರೆಗೆ ವಸತಿರಹಿತರಿಗೆ ವಸತಿ ಭಾಗ್ಯ ಕಲ್ಪಿಸಲು ಅವಿರತವಾಗಿ ಪ್ರಯತ್ನಪಟ್ಟ ಫಲವೇ ಇಂದು 2052 ಜನರಿಗೆ ವಸತಿ ಭಾಗ್ಯ ಸಿಗುತ್ತಿದೆ. ಇವುಗಳಲ್ಲಿ ಕೆಲವೇ ವಸತಿಗಳು ಉಳಿದಿದ್ದು ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ತುಂಬಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಿ’ ಎಂದರು.
‘ಪ್ರತಿಯೊಬ್ಬರಿಗೆ ತಮ್ಮ ಸ್ವಂತ ಮನೆ ಇರಬೇಕು ಎನ್ನುವ ಆಸೆ ಇದ್ದೆ ಇರುತ್ತದೆ. ಕೊನೆಯ ಶ್ವಾಸ ಇರುವವರೆಗಾದರೂ ಸ್ವಂತ ಮನೆ ಹೊಂದಬೇಕೆಂಬುದು ಎಲ್ಲರ ಆಸೆ. 2052 ವಸತಿಗಳಲ್ಲಿ ಒಂದು ಬಿಎಚ್‍ಕೆ 1812 ವಸತಿಗಳು ಪೂರ್ಣತ್ವದ ಹಾದಿಯಲ್ಲಿವೆ. ಉಳಿದ 240 ಎರಡು ಬಿಎಚ್‍ಕೆ ವಸತಿಗಳು ಶೀಘ್ರದಲ್ಲೆ ಆರಂಭಿಸಲಾಗುವುದು. ಇಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮತ್ತೆ ರೂ.10 ಕೋಟಿ ಸರಕಾರದಿಂದ ಶೀಘ್ರದಲ್ಲೆ ಅನುದಾನ ಸಿಗಲಿದೆ. ಫಲಾನುಭವಿಗಳಲ್ಲಿ 115 ಜನರ ಸಾಲ ಮಂಜೂರಾಗಿದೆ. ಇನ್ನುಳಿದವರ ಸಾಲಕ್ಕಾಗಿ ಪ್ರಯತ್ನಗಳು ನಡೆದಿದೆ’ ಎಂದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರಮನ್ ಚಂದ್ರಕಾಂತ ಕೋಠಿವಾಲೆ ಮಾತನಾಡಿ ‘ನುಡಿದಂತೆ ನಡೆಯುವುದು ಸಚಿವೆ ಜೊಲ್ಲೆಯವರ ಸ್ವಭಾವ. ಹಲವಾರು ಯೋಜನೆಗಳನ್ನು ಕ್ಷೇತ್ರದಲ್ಲಿ ತರುವುದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತಿದ್ದಾರೆ. ರಾಜೀವ ಗಾಂಧಿ ವಸತಿ ಯೋಜನೆಯಡಿ ಜಿ+2 ಮಾದರಿಯ ಗುಂಪು ವಸತಿ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮ ಬಾರಿ ತಮ್ಮ ಕ್ಷೇತ್ರದಲ್ಲಿ ಅನುಷ್ಠಾನ ಮಾಡಿರುವುದು ಅವರ ಕಾರ್ಯವೈಖರಿಯ ರಸೀದಿಯಾಗಿದೆ. ಈ ಯೋಜನೆಯ ಲಾಭ ಅರ್ಹರು ಪಡೆದುಕೊಳ್ಳಬೇಕು’ ಎಂದರು.
ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಮಾತನಾಡಿ ‘1994ರಿಂದ ನಗರದಲ್ಲಿ ಅರ್ಹರಿಗೆ ವಸತಿ ಭಾಗ್ಯ ಸಿಕ್ಕಿದ್ದಿಲ್ಲ. ಆದರೆ ಸಚಿವೆ ಜೊಲ್ಲೆ ಮತ್ತು ಸಂಸದ ಜೊಲ್ಲೆಯವರ ಪ್ರಯತ್ನದಿಂದ ಬಹುವರ್ಷಗಳ ನಂತರ ಇಲ್ಲಿ ವಸತಿ ಭಾಗ್ಯ ಸಿಗುತ್ತಿದೆ’ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಡಾ. ಮೋಹನ ಭಸ್ಮೆ, ಪೌರಾಯುಕ್ತ ಜಗದೀಶ ಹುಲಿಗೆಜ್ಜೆ, ಹಾಲಶುಗರ ಸಂಚಾಲಕ ಆರ್.ವೈ. ಪಾಟೀಲ, ಸಿಪಿಐ ಸಂಗಮೇಶ ಶಿವಯೋಗಿ, ಆಸ್ರಯ ಸಮಿತಿಯ ಸದಸ್ಯ ಉದಯ ಶಿಂಧೆ, ಅಸ್ಲಂ ಹವಾಲ್ದಾರ, ಮಹಾದೇವಿ ನೇರ್ಲಿ. ಮೊದಲಾದವರು ಉಪಸ್ಥಿತರಿದ್ದರು.
ಹಾಲಶುಗರ ಚೇರಮನ್ ಚಂದ್ರಕಾಂತ ಕೋಠಿವಾಲೆ, ಆರ್.ವೈ ಪಾಟೀಲ, ಜಯವಂತ ಭಾಟಲೆ, ನೀತಾ ಬಾಗಡೆ, ಜಯವಂತ ಭಾಟಲೆ, ಅಸ್ಲಂ ಹವಾಲ್ದಾರ ಮತ್ತಿತರರು ಉಪಸ್ಥಿತರಿದ್ದರು.
ಎಥನಾಲ್ ಪಾಲಿಸಿಯಿಂದ ಹೆಚ್ಚಿನ ಲಾಭ – ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ