*ಪಿ.ಎಂ.ಎಫ್.ಎಂ.ಇ. ಯೋಜನೆಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ*
ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ರೈತರು ದೇಶದ ಬೆನ್ನೆಲುಬು. ಅವರ ಸ್ವಾಭಿಮಾನಿ ಬದುಕಿಗಾಗಿ ಆತ್ಮನಿರ್ಭರ ಭಾರತ ಯೋಜನೆ ಮೂಲಕ ವಿವಿಧಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ. ನಿಪ್ಪಾಣಿ ಕ್ಷೇತ್ರದ 40 ರೈತ ಮಹಿಳೆಯರು ಪ್ರಧಾನ ಮಂತ್ರಿ ಫಾರ್ಮೂಲೈಜೆಶನ್ ಆಫ್ ಮೈಕ್ರೊಫೂಡ್ ಪ್ರೊಸೆಸಿಂಗ್ ಎಂಟರ್‍ಪೈಸಿಸ್ ಯೋಜನೆಯ ಲಾಭವನ್ನು ಪಡೆದು ಸ್ವಾವಲಂಬನೆಯ ಜೀವನ ಸಾಗಿಸುತ್ತಿದ್ದಾರೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಮಂಗಳವಾರ ಜೊಲ್ಲೆ ಗ್ರುಪ್ ವತಿಯಿಂದ ಆಯೋಜಿಸಿದ ಪ್ರಧಾನ ಮಂತ್ರಿ ಫಾರ್ಮೂಲೈಜೆಶನ್ ಆಫ್ ಮೈಕ್ರೊ ಫೂಡ್ ಪ್ರೊಸೆಸಿಂಗ್ ಎಂಟರ್‍ಪೈಸಿಸ್ ಯೋಜನೆ ಅಂರ್ತಗತ ಸ್ಥಳೀಯ ರೈತ ಮಹಿಳೆಯರು ತಯಾರಿಸಿದ ತಿಂಡಿ ತಿನಿಸುಗಳ ಮಾರಾಟಕ್ಕಾಗಿ ಮೋಬೈಲ್ ವ್ಯಾನ್‍ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ರೈತ ಮಹಿಳೆಯರು ತಯಾರಿಸಿದ ತಿಂಡಿ ತಿನಿಸುಗಳಿಗೆ ಮಾರುಕಟ್ಟೆ ವದಿಗಿಸಲು ಜೊಲ್ಲೆ ಗ್ರುಫ್ ವಿವಿಧ ಯೋಜನೆಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಇಂದು ನಿಪ್ಪಾಣಿ ತಾಲೂಕಿನಲ್ಲಿ ಎರಡು ಮೊಬೈಲ್ ವ್ಯಾನ್‍ಗಳನ್ನು ಒದಗಿಸಿದೆ. ಜತೆಗೆ ನಗರದ ಮ್ಯಾಗ್‍ನಮ್ ಮಾಲ್‍ದಲ್ಲಿ ಮಳಿಗೆ ಪ್ರಾರಂಭಿಸಿದೆ. ಜ್ಯೋತಿ ಬಝಾರದಲ್ಲಿಯು ಅವರ ಉತ್ಪನ್ನಗಳನ್ನು ಮಾರಾಟª ಮಾಡಲಾಗುತ್ತಿದೆ. ತಾಲೂಕಿನ ಕೃಷಿಪ್ರಿಯಾ ಮಹಿಳಾ ಎಫ್‍ಪಿಓ ಗೆ ಆಮದು ಮತ್ತು ರಫ್ತು ಪರವಾನಗಿಯನ್ನು ದೊರಕಿಸಿಕೊಡಲಾಗಿದೆ. ಈ ಮೂಲಕ ಸ್ಥಳೀಯ ರೈತರ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಿ ಸ್ವಾವಲಂಬಿ ಬದುಕಿಗೆ ನಾಂದಿ ಹಾಡಲಾಗಿದೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಸ್ಪರ್ಧಾತ್ಮಕ, ತಂತ್ರಜ್ಞಾನ, ಕಲಿಯುಗದಲ್ಲಿ ರೈತರ ಆದಾಯ ದ್ವೀಗುಣಗೊಳಿಸಬೇಕೆಂದು ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಿನಿಷ್ಟ್ರಿ ಆಫ್ ಫೂಡ್ ಪ್ರೊಸೆಸಿಂಗ್ ಇಂಡಸ್ಟ್ರಿ ಇಲಾಖೆಯಿಂದ ಪ್ರಧಾನ ಮಂತ್ರಿ ಫಾರ್ಮೂಲೈಜೆಶನ್ ಆಫ್ ಮೈಕ್ರೊಫೂಡ್ ಪ್ರೊಸೆಸಿಂಗ್ ಎಂಟರ್‍ಪೈಸಿಸ್ (ಪಿಎಮ್‍ಎಫ್‍ಎಮ್‍ಈ) ಸುಂದರವಾದ ಪರಿಕಲ್ಪನೆಯ ಯೋಜನೆಯನ್ನು ಜಾರಿತಂದರು. ಪ್ರಧಾನಮಂತ್ರಿ ಆತ್ಮನಿರ್ಭರ ಭಾರತ ಯೋಜನೆಗೆ ಇದು ಬಲ ನೀಡುತ್ತಿದ್ದು ರೈತರ ಸ್ವಾಭಿಮಾನಿ ಬದುಕಿಗೆ ಇಂದು ಸಹಾಯಕವಾಗಿ ಪರಿಣಮಿಸುತ್ತಿದೆ ಎಂದರು. ಪಿಎಮ್‍ಎಫ್‍ಎಮ್‍ಈ ಯೋಜನೆಯು 2 ಕೋಟಿ ರೂ.ಗಳ ವರೆಗೆ ಸಾಲಸೌಲಭ್ಯ ನೀಡುತ್ತಿದೆ. ಇದರಲ್ಲಿ ಶೇ. 35 ರಷ್ಟು ಸಹಾಯಧನದ ಸೌಲಭ್ಯವಿದೆ. ಈ ಯೋಜನೆಯ ಲಾಭ ಪಡೆದು ರೈತ ಮಹಿಳೆಯರು ಉದ್ಯಮಿಗಳಾಗುತ್ತಿದ್ದಾರೆ. ಇನ್ನಷ್ಟು ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭ ಪಡೆಯಬೇಕು, ಆಸಕ್ತರು ನಮ್ಮ ಕಾರ್ಯಾಲಯಕ್ಕೆ ಭೇಟಿ ನೀಡಿ ಅಧಿಕ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭೆಯ ಮಾಜಿ ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ರಾಜೇಂದ್ರ ಗುಂದೆಶಾ,ಸುನೀಲ ಪಾಟೀಲ, ಮಹಾಲಿಂಗ ಕೋಠಿವಾಲೆ, ಸಿದ್ದು ನರಾಟೆ, ವಿಜಯ ರಾವುತ ಸೇರಿದಂತೆ ನಗರಸಭೆ ಸದಸ್ಯರು,ಮಹಿಳಾ ಉದ್ಯಮಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ