20 ಲಕ್ಷ ಕೋಟಿ ಪ್ಯಾಕೇಜ್ ನ ಕೊನೆ ಕಂತಿನ ಹಂಚಿಕೆ; ಆನ್ ಲೈನ್ ಶಿಕ್ಷಣಕ್ಕೆ ಆದ್ಯತೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೋರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದಲ್ಲಿ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ.ಕುರಿತ ಕೊನೆಯ ಕಂತಿನ ಹಂಚಿಕೆ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.

ದೇಶ ಇಂದು ಬಹಳ ಕಷ್ಟದ ಸ್ಥಿತಿಯಲ್ಲಿದೆ. ಬಿಕ್ಕಟ್ಟನ್ನು ಅವಕಾಶವಾಗಿ ಬಳಸಿಕೊಳ್ಳಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಜೀವ ಇದ್ದರೆ ಜೀವನ ಎಂದು ಹೇಳಿದ್ದಾರೆ. ಎಲ್ಲಾ ರಾಜ್ಯ ಸರ್ಕಾರಗಳು ಶ್ರಮ ವಹಿಸಿ ಕಾರ್ಯನಿರ್ವಹಿಸುತ್ತಿವೆ. ಗುಣಮಟ್ಟದ ಆಹಾರಪದಾರ್ಥಗಳನ್ನು ಜನರಿಗೆ ನೀಡಲಾಗುತ್ತಿದೆ. ಇಂದು ಡಿಜಿಟಲ್ ಶಿಕ್ಷಣ, ಆರೋಗ್ಯ, ಭೂಮಿ, ಕಾರ್ಮಿಕರು, ನಗದು, ಕಾನೂನಿಗೆ ಸಂಬಂಧಿಸಿದಂತೆ ಪ್ಯಾಕೇಜ್ ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.

* 8.19 ಕೋಟಿ ರೈತರ ಖಾತೆಗೆ ಹಣ ವರ್ಗಾವಣೆಯಾಗಿದೆ
* 20 ಕೋಟಿ ಮಹಿಳೆಯರಿಗೆ ಜನ್ ಧನ್ ಹಣ ವರ್ಗಾವಣೆ ಮಾಡಲಾಗಿದೆ
* 10.025 ಲಕ್ಷ ಹಣ ವರ್ಗಾವಣೆಯಾಗಿದೆ.
* ಕಟ್ಟಡ ಕಾರ್ಮಿಕರ ಖಾತೆಗೂ ಹಣ ವರ್ಗಾವಣೆಯಾಗಿದೆ
* ಉಜ್ವಲ ಯೋಜನೆಯಡಿ 6.18 ಕೋಟಿ ಉಚಿತ ಸಿಲಿಂಡರ್ ನೀಡಲಾಗಿದೆ
* ದೇಶದಲ್ಲಿ ಆರೋಗ್ಯ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ
* ಆರೋಗ್ಯ ಕ್ಷೇತ್ರಕ್ಕೆ 15,000 ಕೋಟಿ ರೂ ಘೋಷಣೆ
* ಹೊಸ ಲ್ಯಾಬ್​ಗಳ ನಿರ್ಮಾಣಕ್ಕೆ 550 ಕೋಟಿ
* ಹೆಚ್ಚು ಪಬ್ಲಿಕ್ ಹೆಲ್ತ್ ಲ್ಯಾಬ್ ಗಳ ನಿರ್ಮಾಣಕ್ಕೆ ಕ್ರಮ
* ಮಾಸ್ಕ್​ ಹಾಗೂ ಪಿಪಿಇ ಕಿಟ್​ಗಳಿಗೆ 3,750 ರೂಪಾಯಿ ಮೀಸಲು
* ಡಿಟಿಹೆಚ್ ಮೂಲಕ ಆನ್ ಲೈನ್ ಎಜುಕೇಷನ್ ಗೆ ಹೆಚ್ಚಿನ ಉತ್ತೇಜನ
* ಡಿಜಿಟಲ್ ಶಿಕ್ಷಣಕ್ಕಾಗಿ ಪಿಎಂ ಇ ವಿದ್ಯಾ ಯೋಜನೆ
* ಒನ್ ಕ್ಲಾಸ್, ಒನ್ ಚಾನಲ್ ಯೋಜನೆಗೆ ಕ್ರಮ
* 1ರಿಂದ 12 ನೇ ತರಗತಿವರೆಗಿನ ಶಿಕ್ಷಣಕ್ಕೆ ಪ್ರತ್ಯೇಕ ಚಾನಲ್
* ಅಂಧರಗಿಗೆ ರೇಡಿಯೋ ಮೂಲಕ ಶಿಕ್ಷಣ
* ದಿವ್ಯಾಂಗರಿಗೆ ಪ್ರತ್ಯೇಕ ಪಠ್ಯ ಪುಸ್ತಕ ನೀಡಲು ನಿರ್ಧಾರ
* ಮೇ 30ರಿಂದ 100 ವಿವಿಗಳಲ್ಲಿ ಆನ್ ಲೈನ್ ಶಿಕ್ಷಣ ಆರಂಭ
* ರಾಜ್ಯಗಳ ಸಾಲ ಪಡೆಯುವ ಮಿತಿ ಶೇ.60 ಹೆಚ್ಚಳ
* ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ, ಕಂಪನಿಗಳು ಸಾಲ ಮರು ಪಾವತಿ ಮಾಡದಿದ್ದರೆ ಅಂಥವರನ್ನು ಸುಸ್ತಿದಾರ ಎಂದು ಪರಿಗಣನೆ ಇಲ್ಲ
* ವಿದೇಶಿ ಮಾರುಕಟ್ಟೆಗಳಲ್ಲಿ ಭಾರತದ ಕಂಪನಿಗಳಿಗೆ ನೋಂದಣಿಗೆ ಅವಕಾಶ
* ಸಾರ್ವಜನಿಕ ಕ್ಷೇತ್ರದ ಕೆಲ ಉದ್ಯಮಗಳು ಖಾಸಗೀಕರಣ
* ಎಲ್ಲ ವಲಯಗಳಲ್ಲೂ ಖಾಸಗಿ ಕಂಪನಿಗಳಿಗೆ ಹೂಡಿಕೆಗೆ ಅವಕಾಶ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button