Latest

ಕಾರಿನ ಮೇಲೆ ಕುಸಿದುಬಿದ್ದ ಬೆಟ್ಟ

ಪ್ರಗತಿವಾಹಿನಿ ಸುದ್ದಿ; ತಿರುಮಲ: ನಿವಾರ್ ಚಂಡಮಾರುತದಿಂದಾಗಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ತಿರುಮಲದಲ್ಲಿ ಗುಡ್ಡ ಕುಸಿತವಾಗುತ್ತಿದೆ. ಪರಿಣಾಮ ಬೃಹತ್ ಬಂಡೆ, ಮರಗಳು ಬೆಟ್ಟದಿಂದ ಉರುಳಿಬೀಳುತ್ತಿದೆ.

ಭಾರಿ ಮಳೆಯಿಂದಾಗಿ ತಿರುಮಲದಲ್ಲಿ ಬೆಟ್ಟದಿಂದ ಬೃಹತ್ ಬಂಡೆಗಳು ಉರುಳಿ ಬೀಳುತ್ತಿದ್ದು, ತಿರುಮಲಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಬೆಟ್ಟಕುಸಿದು ಬಿದ್ದಿದೆ. ಮರಗಳು, ಬೃಹತ್ ಬಂಡೆಗಳು ರಸ್ತೆಗೆ ಉರುಳಿಬೀಳುತ್ತಿರುವುದರಿಂದ ತಿರುಮಲ ತಿರುಪತಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಇನ್ನೊಂದೆಡೆ ಭಾರೀ ಮಳೆಯಿಂದಾಗಿ ಚಿತ್ತೂರು ಜಿಲ್ಲೆಯ ತಿರುಮಲ ದೇವಾಲಯದ ಆವರಣ ಜಲಾವೃತಗೊಂಡಿದೆ. ವರದಯ್ಯಪಾಲಮ್ ನ 8 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

Home add -Advt

Related Articles

Back to top button